ಹೊಳೆಯಲ್ಲಿ ಮಿಂದೆದ್ದು ಬಂದವನೇ ಬೈಕ್​ ನೋಡಿ ಪೊಲೀಸರಿಗೆ ಫೋನ್​ ಮಾಡ್ದ, ಅಂತದ್ದೇನಾಯ್ತು ?

Published: 15 ಏಪ್ರಿಲ್ 2026, 12:06 ಅಪರಾಹ್ನ • 1 min read

ಶಿವಮೊಗ್ಗ : ಈಜಲು ತೆರಳಿದ್ದ ವೇಳೆ ಕಳ್ಳರು ಬೈಕ್​ನ ಸೀಟ್​ ಮುರಿದು ಸಾವಿರಾರು ರೂಪಾಯಿ ಕಳ್ಳತನ ಮಾಡಿರುವ ಘಟನೆ ಇಲ್ಲಿನ ತುಂಗಾನಗರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಶಿವಮೊಗ್ಗ-ಬೆಂಗಳೂರು ವಿಮಾನ ಸ್ಥಗಿತ : ಸಚಿವರಿಗೆ ಬಿ.ವೈ. ರಾಘವೇಂದ್ರ ಪತ್ರ

ಘಟನೆ ವಿವರ

ದೂರುದಾರರು ನಿನ್ನೆ ಸಂಜೆ ತಮ್ಮ ಮೂಪೇಡ್​ ವಾಹನವನ್ನು ನದಿಯ ಬಳಿ ನಿಲ್ಲಿಸಿ ಈಜಾಡಲು ತೆರಳಿದ್ದರು. ಹೊಳೆಯಲ್ಲಿ ಮಿಂದೆದ್ದು ಸ್ವಲ್ಪ ರಿಲ್ಯಾಕ್ಸ್​ ಆಗಿ ಬಂದವರಿಗೆ ತಮ್ಮ ಬೈಕ್​ನ್ನ ನೋಡಿ ಒಮ್ಮೆಲೆ ಶಾಕ್​ ಎದುರಾಯಿತು. ಅದೇನೆಂದರೆ ಯಾರೋ ಕಳ್ಳರು ಮೂಪೇಡ್​​ ವಾಹನದ ಸೀಟ್​ನ್ನು ಮುರಿದು ಬರೋಬ್ಬರಿ 15 ಸಾವಿರ ರೂಪಾಯಿ ಕಳ್ಳತನ  ಮಾಡಿಕೊಂಡು ಹೋಗಿದ್ದರು.

ಆ ಕೂಡಲೇ ಏನು ಮಾಡಬೇಕೆಂದು ತಿಳಿಯದ ದೂರುದಾರ ಕೂಡಲೇ 112 ಪೊಲೀಸ್​ ಸಿಬ್ಬಂದಿಗಳಿಗೆ ಫೋನಾಯಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಅಕ್ಕ ಪಕ್ಕ ಎಲ್ಲೆಡೆ ಹುಡುಕಿದರು.ಆದರೆ ಎಲ್ಲಿಯೂ ಸಹ ಕಳ್ಳರ ಸುಳಿವು ಸಿಗದ ಕಾರಣ ದೂರುದಾರನನ್ನು ಪೊಲೀಸ್​ ಠಾಣೆಗೆ ಬಂದು ದೂರು ದಾಖಲಿಸುವಂತೆ ಸೂಚಿಸಿದ್ದಾರೆ. 

Shivamogga 15K Stolen from Bike Near River

Shivamogga 15K Stolen from Bike Near River
Shivamogga 15K Stolen from Bike Near River
shivamogga car decor sun control house
car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Ganesh Ajjimane

Senior Journalist | Malenadu Today
✓ Verified Journalist

Authority

Published by: Malenadu Today Editorial Desk
✓ Fact Checked   ✓ Updated   Editorial Policy