ಧುರಂದ‌ರ್-ದಿ ರಿವೇಂಜ್ ಚಿತ್ರದ ಕಲೆಕ್ಷನ್ ₹1700 ಕೋಟಿ

ಹಂಚಿಕೊಳ್ಳಿ
WhatsApp Facebook X Telegram
ಧುರಂದ‌ರ್-ದಿ ರಿವೇಂಜ್ ಚಿತ್ರದ ಕಲೆಕ್ಷನ್ ₹1700 ಕೋಟಿ

ರಣವೀರ್ ಸಿಂಗ್ ನಟಿಸಿರುವ ‘ಧುರಂದರ್-ದಿ ರಿವೇಂಜ್’ ಸಿನಿಮಾ ಬಿಡುಗಡೆಯಾಗಿ 26 ದಿನಗಳು ಕಳೆದಿವೆ. ಈಗಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾ ಇದೀಗ ತನ್ನ ವರಮಾನದಿಂದ ಸುದ್ದಿಯಾಗಿದೆ. ಈ , ಸಿನಿಮಾದ ಒಟ್ಟು ಗಳಿಕೆಯು ₹1700 ಕೋಟಿ ದಾಟಿದೆ ಅಂತಾ ಜಿಯೋ ಸ್ಟುಡಿಯೋಸ್ ಅಧಿಕೃತವಾಗಿ ಮಾಹಿತಿ ನೀಡಿದೆ. ಆದಿತ್ಯ ಧರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು ಮೊದಲ ದಿನದಿಂದಲೇ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

‘ಧುರಂದರ್-ದಿ ರಿವೇಂಜ್’

ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ ಯೇ ಸಿನಿಪ್ರಿಯರ ರೆಸ್ಪಾನ್ಸ್ ನೋಡು ಚಿತ್ರ ಒಟ್ಟು ಕಲೆಕ್ಷನ್ ₹2000 ಕೋಟಿ ಮೀರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಅದರಂತೆ, ಮೊದಲ ವಾರದಲ್ಲಿಯೇ ಸಿನಿಮಾ ₹650 ಕೋಟಿಗೂ ಹೆಚ್ಚು ಹಣವನ್ನು ಗಳಿಸಿತ್ತು. ಆದರೆ, ಎರಡನೇ ವಾರದಲ್ಲಿ ಚಿತ್ರದ ಗಳಿಕೆಯ ಪ್ರಮಾಣವು ₹260 ಕೋಟಿಗೆ ಇಳಿಕೆಯಾಯಿತು. ತದನಂತರದ ವಾರಗಳಲ್ಲಿಯೂ ಕಲೆಕ್ಷನ್ ಪ್ರಮಾಣ ಇನ್ನಷ್ಟು ಕಡಿಮೆಯಾಗುತ್ತಾ ಸಾಗಿತು.

ಒಟ್ಟಾರೆಯಾಗಿ ವಿಶ್ವದಾದ್ಯಂತ ಆಗಿರುವ ₹1700 ಕೋಟಿ ಗಳಿಕೆಯ ಪೈಕಿ, ದೇಶವೊಂದರಿಂದಲೇ ₹1100 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ದೇಶಭಕ್ತಿ, ಪಾಕಿಸ್ತಾನದ ಭೂಗತ ಜಗತ್ತು ಹಾಗೂ ಗೂಢಚಾರಿಕೆಯ ಕಥಾವಸ್ತುವನ್ನು ಒಳಗೊಂಡಿರುವ ಈ ಚಿತ್ರವು, ತನ್ನ ವಿರುದ್ಧ ಕೇಳಿಬಂದ ಎಲ್ಲಾ ನಕಾರಾತ್ಮಕ ವಿಮರ್ಶೆಗಳನ್ನು ಹಿಮ್ಮೆಟ್ಟಿಸಿ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿದೆ. ಕೇವಲ ಗಳಿಕೆಯಲ್ಲಿ ಮಾತ್ರವಲ್ಲದೆ, ತಾಂತ್ರಿಕವಾಗಿಯೂ ಚಿತ್ರರಂಗದ ಹಲವು ತಂತ್ರಜ್ಞರಿಂದ ಈ ಚಿತ್ರಕ್ಕೆ ಅಪಾರವಾದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್. ಮಾಧವನ್ ಹಾಗೂ ಸಾರಾ ಅರ್ಜುನ್ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಜಿಯೋ ಸ್ಟುಡಿಯೋಸ್ ಜೊತೆಗೆ ಆದಿತ್ಯ ಧರ್, ಲೋಕೇಶ್ ಧರ್ ಹಾಗೂ ಬಿ62 ಸ್ಟುಡಿಯೋಸ್ ಕೂಡ ಚಿತ್ರದ ನಿರ್ಮಾಣ ಕಾರ್ಯದಲ್ಲಿ ಪಾಲುದಾರಿಕೆಯನ್ನು ಹೊಂದಿವೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಧುರಂದ‌ರ್-ದಿ ರಿವೇಂಜ್ ಚಿತ್ರದ ಕಲೆಕ್ಷನ್ ₹1700 ಕೋಟಿ
ಧುರಂದ‌ರ್-ದಿ ರಿವೇಂಜ್ ಚಿತ್ರದ ಕಲೆಕ್ಷನ್ ₹1700 ಕೋಟಿ dhurandar The Revenge Box Office Collection Crosses ₹1700
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor