ಮಲೆನಾಡು ಟುಡೆ ಸುದ್ದಿ / ಸಾಗರ / ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ಅವರ 95ನೇ ಜನ್ಮದಿನ ಸೆಪ್ಟೆಂಬರ್ 10ರಂದು ನಡೆಯಲಿದ್ದು, (Kagodu Thimmappa 95th Birthday) ಅಂದು ಶುಭಾಶಯ ಕೋರಲು ಬರುವ ಅಭಿಮಾನಿಗಳು ಹಾರ, ಶಾಲು, ಹೂವಿನ ಬೊಕ್ಕೆ ಹಾಗೂ ಕೇಕ್‌ಗಳನ್ನು ತರಬಾರದು ಎಂದು ಕಾಗೋಡು ತಿಮ್ಮಪ್ಪ ಹೆಲ್ತ್ ಫೌಂಡೇಶನ್ ಮುಖ್ಯಸ್ಥೆ ಹಾಗೂ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಕಾಗೋಡು ಮನವಿ ಮಾಡಿದ್ದಾರೆ.
- ಗುರುವಾರ ಕಾಗೋಡು ತಿಮ್ಮಪ್ಪ ಅವರ 95ನೇ ಜನ್ಮದಿನವಾಗಿದ್ದು, ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಈಗಿನಿಂದಲೇ ಸಿದ್ಧತೆ ನಡೆಸುತ್ತಿರುವುದು ಸ್ವಾಗತಾರ್ಹ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಜನ್ಮದಿನದಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ 5.30ರವರೆಗೆ ಅಭಿಮಾನಿಗಳು ಆಗಮಿಸಿ ಕಾಗೋಡು ತಿಮ್ಮಪ್ಪ ಅವರಿಗೆ ಶುಭಾಶಯ ಕೋರಬಹುದು ಎಂದು ಡಾ.ರಾಜನಂದಿನಿ ತಿಳಿಸಿದ್ದಾರೆ.
ಕಾಗೋಡು ತಿಮ್ಮಪ್ಪ ಅವರ ವಯೋಸಹಜ ಕಾಳಜಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಶುಭಾಶಯ ಕೋರಲು ಬರುವವರು ಯಾವುದೇ ರೀತಿಯ ಹಾರ, ಶಾಲು, ಹೂವಿನ ಬೊಕ್ಕೆ ಹಾಗೂ ಕೇಕ್‌ಗಳನ್ನು ತರಬಾರದು. ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಡಾ.ರಾಜನಂದಿನಿ ಕಾಗೋಡು ಮನವಿ ಮಾಡಿದ್ದಾರೆ.
