ಮಲೆನಾಡು ಟುಡೆ ಸುದ್ದಿ/ ಭದ್ರಾವತಿ ಮಲೆನಾಡು ಟುಡೆ ಸುದ್ದಿ / ಭದ್ರಾವತಿ:ತರೀಕೆರೆ ವಲಯದ ಹುಣಸಘಟ್ಟ ಶಾಖಾ ವ್ಯಾಪ್ತಿಯ ಸಾವೆಮರಡಿ ಕಾವಲ್ ಗ್ರಾಮದ ವ್ಯಕ್ತಿಯೊಬ್ಬರ ದನದ ಕೊಟ್ಟಿಗೆಯಲ್ಲಿ ಮೂರು ಮುಳ್ಳುಹಂದಿಗಳ ಮೃತದೇಹಗಳು ಪತ್ತೆಯಾಗಿವೆ.
ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಹರೀಶ್ ಕೆ.ಆರ್. ಅವರ ನೇತೃತ್ವದಲ್ಲಿ ಸುರೇಶ್ ಎಂಬುವವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು, ಆ ಸಂದರ್ಭದಲ್ಲಿ ದನದ ಕೊಟ್ಟಿಗೆಯಲ್ಲಿ 03 ಮುಳ್ಳುಹಂದಿಗಳ ಮೃತದೇಹಗಳು ಪತ್ತೆಯಾಗಿದ್ದು, 03 ಮುಳ್ಳುಹಂದಿಗಳ ಮೃತದೇಹಗಳನ್ನು ಹಾಗೂ ಮೂವರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಅರಣ್ಯ ಮೊಕದ್ದಮೆ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಉಮೇಶ್ ಕೆ., ಗಸ್ತು ಅರಣ್ಯ ಪಾಲಕರಾದ ಅನ್ನಪೂರ್ಣೇಶ್ವರಿ ಹೆಗ್ಗಡೆ, ಸುನೀಲ್ ಪೂಜಾರಿ ಹಾಗೂ ನೆಡುತೋಪು ಕಾವಲುಗಾರರಾದ ರಾಜು ಮತ್ತು ನಾಗರಾಜ ಹಾಜರಿದ್ದರು.
