BREAKING NEWS ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ರೇಡ್!

This Article Written by / Malenadu Today / ಮಾರ್ಚ್ 21, 2024

shivamogga Mar 21, 2024  ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರು ರೇಡ್ ಮಾಡಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಈ ರೇಡ್ ನಡೆದಿರುವ ಮಾಹಿತಿ ಮಲೆನಾಡು ಟುಡೆಗೆ ಲಭ್ಯವಾಗಿದೆ. 

ಇವತ್ತು ಬೆಳಗ್ಗೆ 11.30 ರ ಸುಮಾರಿಗೆ ಶಿವಮೊಗ್ಗ ಪೊಲೀಸ್ ಇಲಾಖೆಯ ಎಎಸ್​ಪಿ ಅನಿಲ್​ ಬೂಮರೆಡ್ಡಿ ನೇತೃತ್ವದಲ್ಲಿ ಇಬ್ಬರು ಡಿವೈಎಸ್​ಪಿ ಹಾಗೂ 10 ಇನ್​ಸ್ಪೆಕ್ಟರ್​ ಹಾಗೂ 60 ಕ್ಕೂ ಹೆಚ್ಚು ಪೊಲೀಸರ ತಂಡ ರೇಡ್​ನಲ್ಲಿ ಪಾಲ್ಗೊಂಡಿದೆ. 

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಕಾರಾಗೃಹದಲ್ಲಿ ಯಾವುದೇ ನಿಷೇಧಿತ ವಸ್ತುಗಳು ದೊರಕಿಲ್ಲ ಎನ್ನಲಾಗಿದೆ. ಇನ್ನೂ ಪೊಲೀಸ್ ಪರಿಶೀಲನೆ ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ನಡೆದಿದೆ. 

Shimoga Central Jail

ಮುಂದಿನ ಸುದ್ದಿ ಒದಿ

Leave a Comment