ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದಲ್ಲಿ ಶಿವರಾಜ್​ ಕುಮಾರ್​ ದಂಪತಿ ವಿಶೇಷ ಪೂಜೆ ! ಬೇಳೂರು ಗೋಪಾಲಕೃಷ್ಣ , ಮಧು ಬಂಗಾರಪ್ಪ ಸಾಥ್

ಹಂಚಿಕೊಳ್ಳಿ
WhatsApp Facebook X Telegram

Shivamogga Mar 20, 2024   ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್​ ಇವತ್ತು ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟು ತಾಯಿ ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ. ಬೆಳಗ್ಗೆಯೇ ದೇಗುಲ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದ ದಂಪತಿ, ಕೊಲ್ಲೂರು ತಾಯಿಯ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು ದೇಗುಲಕ್ಕೆ ಪ್ರದಕ್ಷಿಣೆ ಹಾಕಿ, ಆ ಬಳಿ ವೀರಭದ್ರ ದೇವರಿಗೂ ಪೂಜೆ ಸಲ್ಲಿಸಿದರು. 

ಶಿವರಾಜ್ ಕುಮಾರ್​ ದಂಪತಿಯ ಜೊತೆಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಸಹ ದೇಗುಲದಲ್ಲಿ ಮಡಿಯುಟ್ಟು ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದ್ದರು. ಸರ್ವಜ್ಞ ಪೀಠಕ್ಕೆ ದೀಪ ತೋರಿ, ಭಕ್ತಿಯಿಂದ ನಮಿಸಿದರು. 

ನಿನ್ನೆಯಷ್ಟೆ ಶಿವಮೊಗ್ಗಕ್ಕೆ ಎಂಟ್ರಿಯಾಗಿದ್ದ ಶಿವರಾಜ್ ಕುಮಾರ್ ದಂಪತಿ ಬೈಕ್ ಱಲಿ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಆನಂತರ ಬೈಂದೂರಿಗೆ ತೆರಳಿದ್ದರು. ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ಅಲ್ಲಿಯ ಭಾಗದಲ್ಲಿ ಶಿವಣ್ಣ ಮತಪ್ರಚಾರ ನಡೆಸಲಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor