ಸಾರ್ವಜನಿಕರಿಗೆ ಸೂಚನೆ ! ಮಾರ್ಚ್​ 31 ಭಾನುವಾರವೂ ತೆರದಿರಲಿವೆ ಎಲ್ಲಾ ಬ್ಯಾಂಕ್​ಗಳು ! ಇಲ್ಲಿದೆ ಆರ್​ಬಿಐ ಸೂಚನೆ!

ಹಂಚಿಕೊಳ್ಳಿ
WhatsApp Facebook X Telegram

Shivamogga Mar 20, 2024  ಎಲ್ಲಾ ಬ್ಯಾಂಕ್‌ಗಳು ಇದೇ ಮಾರ್ಚ್‌ 31 ರ ಭಾನುವಾರವೂ ಓಪನ್‌ ಇರಲಿದೆ. ಈ ಸಂಬಂಧ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೂಚನೆಯೊಂದನ್ನ ಹೊರಡಿಸಿದೆ. 

ಇದಕ್ಕೆ ಕಾರಣ, ಈ ವರ್ಷದ ಆರ್ಥಿಕ ವಹಿವಾಟುಗಳು ಮಾರ್ಚ್​​ 31 ಕ್ಕೆ ಮುಕ್ತಾಯಗೊಳ್ಳಲಿದೆ. ಕೊನೆಯ ದಿನದ ವಹಿವಾಟಿನಲ್ಲಿ ಬಹಳಷ್ಟು ದುಡ್ಡು ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆಗಳಿರುತ್ತದೆ. ಆದರೆ ಭಾನುವಾರ ಆದ್ದರಿಂದ ಬ್ಯಾಂಕ್​ಗಳು ಸಹಜವಾಗಿಯೇ ಕ್ಲೋಸ್ ಇರುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗುವುದನ್ನ ತಪ್ಪಿಸುವ ಸಲುವಾಗಿ ಆರ್​ಬಿಐ ಈ ಸೂಚನೆಯನ್ನ ಹೊರಡಿಸಿದೆ. 

ಆರ್​ಬಿಐ ಸೂಚನೆಯಲ್ಲಿ ಏನಿದೆ. 

ಎಲ್ಲಾ ಏಜೆನ್ಸಿ ಬ್ಯಾಂಕ್‌ಗಳು ಮಾರ್ಚ್ 31, 2024 ರಂದು (ಭಾನುವಾರ) ಸಾರ್ವಜನಿಕರಿಗೆ ತೆರೆದಿರುತ್ತವೆ

FY 2023 ಆರ್ಥಿಕ ವರ್ಶದ ರಶೀದಿಗಳು ಮತ್ತು ಪಾವತಿಗಳಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ವಹಿವಾಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೂ  ಮಾರ್ಚ್ 31, 2024 (ಭಾನುವಾರ) ರಂದು ಬ್ಯಾಂಕ್​ಗಳು ಮುಕ್ತವಾಗಿ ಗ್ರಾಹಕರಿಗೆ ತೆರೆದಿರುವಂತೆ ಮನವಿ ಮಾಡಿದ್ದು, ಈ ಸಂಬಂಧ ಎಲ್ಲಾ ಬ್ಯಾಂಕ್​ಗಳು ತಮ್ಮ ಬ್ರಾಂಚ್​ಗಳನ್ನು  ಮಾರ್ಚ್ 31, 2024 ರಂದು (ಭಾನುವಾರ) ತೆರೆದಿಡಲು ಸೂಚಿಸಲಾಗಿದೆ. 2. ಈ ದಿನದಂದು ಮೇಲಿನ ಬ್ಯಾಂಕಿಂಗ್ ಸೇವೆಗಳ ಲಭ್ಯತೆಯ ಬಗ್ಗೆ ಬ್ಯಾಂಕುಗಳು ಸರಿಯಾದ ಪ್ರಚಾರವನ್ನು  ನೀಡಬೇಕು ಎಂದು  ಸೂಚಿಸಲಾಗಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor