ಸುದ್ದಿಯ ಸ್ಥಳ: Chikkamagaluru, Karnataka
ಚಿಕ್ಕಮಗಳೂರು ಜಿಲ್ಲೆ (chikkamagaluru) ತರಿಕೆರೆಯಲ್ಲಿ (tarikere ) ಬೈಕ್ ಹಿಂದಿನ ಚಕ್ರಕ್ಕೆ ಸೀರೆ ನೆರಿಗೆ ಸಿಲುಕಿ ಮಹಿಳೆಯೊಬ್ಬರು ಅದ್ವಾನ ಪಟ್ಟ ಘಟನೆ ಸಂಭವಿಸಿದೆ. ನೆರಿಗೆ ಚಕ್ರಕ್ಕೆ ಸಿಲುಕಿ ಎಳೆದುಕೊಂಡಿದ್ದರಿಂದ ಅದರ ಜೊತೆಗೆ ಕಾಲು ಸಲ ವೀಲ್ಹ್ನೊಳಗೆ ಸಿಲುಕಿಕೊಂಡು ವಿಪರೀತ ನೋವು ಶುರುವಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ಮಹಿಳೆ ನರಳಾಡಿದ್ದಳು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ರೈತನ ಆತ್ಮಹತ್ಯೆ!
ತರೀಕೆರೆ ಪಟ್ಟಣದ ಸಮೀಪದ ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಎಂಬಾಕೆ, ಬೈಕ್ನ ಹಿಂಬದಿಯಲ್ಲಿ ಕುಳಿತು ಬರುತ್ತಿದ್ರು. ಈ ಮಧ್ಯೆ ನೆರಿಗೆ ಚಕ್ರಕ್ಕೆ ಸಿಲುಕಿ, ಕಾಲು ಚಕ್ರದೊಳಗೆ ತೂರಿಕೊಂಡಿದೆ. ಪರಿಣಾಮ ಇಬ್ಬರು ಕೆಳಕ್ಕೆ ಬಿದ್ದಿದ್ದಾರೆ. ಸ್ಥಳೀಯರು ಕೂಡಲೇ ಮಹಿಳೆಯನ್ನು ಬಚಾವ್ ಮಾಡಲು ಮುಂದಾಗಿದ್ಧಾರೆ. ಆದರೆ ಕಾಲು ಚಕ್ರದೊಳಗೆ ಸಿಲುಕಿತ್ತು, ಬಳಿಕ ಸ್ಥಳೀಯರು ಹಾಗೂ ಮೆಕಾನಿಕ್ಗಳು ಗೇರ್ ಬಾಕ್ಸ್ ಬಿಚ್ಚಿ, ಚೈನ್ ಕಟ್ ಮಾಡಿ ಮಹಿಳೆಯನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಮಹಿಳೆಯ ಕಾಲಿಗೆ ಗಾಯವಾಗಿದ್ದುಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com