ಟಿಸಿ ದುರಸ್ತಿ ಮಾಡುತ್ತಿದ್ದಾಗ ಆಘಾತ! ಬೆಸ್ಕಾಂ ನೌಕರ ಸಾವು! ಸವಳಂಗದಲ್ಲಿ ದುರಂತ ನಡೆದಿದ್ದು ಹೀಗೆ!

ಹಂಚಿಕೊಳ್ಳಿ
WhatsApp Facebook X Telegram
Shikaripura Police incidentಶಿಕಾರಿಪುರದ ಅಕ್ಕಮಹಾದೇವಿ ವೃತ್ತದಲ್ಲಿ ಕರ್ತವ್ಯ ನಿರತ ಪೊಲೀಸ್ ಶಂಕರ್ ಅವರಿಗೆ ಬೈಕ್ ಡಿಕ್ಕಿಯಾಗಿದೆ. ಗಾಯಾಳುವನ್ನು ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಪ್ಪನಹಳ್ಳಿಯ ಮೂವರು ಸವಾರರು ವಶಕ್ಕೆ.
ಶಿಕಾರಿಪುರ ಸುದ್ದಿ, ಟೆರೇಸ್‌ನಿಂದ ಬಿದ್ದು ಸಾವು, ಹೊಸದೂಪದಹಳ್ಳಿ. Shikaripura News, Teacher Death, Nandihalli School, Shivamogga District News.

ನ್ಯಾಮತಿ ತಾಲ್ಲೂಕು ಸವಳಂಗ ವ್ಯಾಪ್ತಿಯಲ್ಲಿ ಬೆಸ್ಕಾಂನ ಲೈನ್‌ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಿಕಾರಿಪುರ ಮೂಲದ ಸಿಬ್ಬಂದಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಳೆದ ಮಂಗಳವಾರ ರಾತ್ರಿ ಈ ಘಟನೆ ಸಂಭವಿಸಿದೆ. ಮೃತ ನೌಕರನನ್ನು ಶಿಕಾರಿಪುರ ತಾಲ್ಲೂಕಿನ ಕಿಟ್ಟದಹಳ್ಳಿ ಗ್ರಾಮದ ಮೂಲದ 28 ವರ್ಷದ ಪಿ. ಮನೋಜ ಎಂದು ಗುರುತಿಸಲಾಗಿದೆ.

ಬೆಸ್ಕಾಂ ನೌಕರ ಸಾವು

ಸವಳಂಗ ಸಮೀಪದ ಗಂಜೀನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಪರಿವರ್ತಕದಲ್ಲಿ ಪ್ರಾಬ್ಲಮ್​ ಇತ್ತು. ಅದನ್ನ ಸರಿಪಡಿಸಲು ಲೈನ್‌ಮನ್ ಮನೋಜ ಮಂಗಳವಾರ ರಾತ್ರಿ ಬಂದಿದ್ದರು. ಈ ವೇಳೆ ಅವರಿಗೆ ಕರೆಂಟ್ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ತದನಂತರ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಶಿವಮೊಗ್ಗದ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದು, ಪರೀಕ್ಷಿಸಿದ ವೈದ್ಯರು ಮನೋಜ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಟಿಸಿ ದುರಸ್ತಿ ಮಾಡುತ್ತಿದ್ದಾಗ ಆಘಾತ! ಬೆಸ್ಕಾಂ ನೌಕರ ಸಾವು! ಸವಳಂಗದಲ್ಲಿ ದುರಂತ ನಡೆದಿದ್ದು ಹೀಗೆ!
ಟಿಸಿ ದುರಸ್ತಿ ಮಾಡುತ್ತಿದ್ದಾಗ ಆಘಾತ! ಬೆಸ್ಕಾಂ ನೌಕರ ಸಾವು! ಸವಳಂಗದಲ್ಲಿ ದುರಂತ ನಡೆದಿದ್ದು ಹೀಗೆ! BESCOM Lineman Electrocuted to Death During Repair Work in Nyamathi

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor