Bengaluru News / ಮಲೆನಾಡು ಟುಡೆ ಸುದ್ದಿ / ಬೆಂಗಳೂರು ಸುದ್ದಿ / ಮನೆ ಓನರ್ ಸ್ನಾನ ಮಾಡುತ್ತಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ಟೆಕ್ಕಿಯೊಬ್ಬಾತನನ್ನು ಬೆಂಗಳೂರು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವರದಿಗಾರ ಶಿವು ಮಲೆನಾಡು ಟುಡೆಗೆ ವರದಿಮಾಡಿದ್ದಾರೆ.
ಪ್ರಕರಣದಲ್ಲಿ ಬೇಗೂರು ನಿವಾಸಿ ಮಂಜುನಾಥ್ (30) ಬಂಧಿತ ಆರೋಪಿ. ಈತ ಜುಲೈ 27ರಂದು ಮನೆ ಓನರ್ ಸ್ನಾನ ಮಾಡುವ ವಿಡಿಯೋ ಮಾಡುತ್ತಿದ್ದ . ಇದನ್ನ ಸ್ವತಃ ಮನೆ ಓನರ್ ನೋಡಿದ್ದರು. ಈ ಬಗ್ಗೆ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ,.
ಆರೋಪಿ ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 5 ವರ್ಷಗಳಿಂದ ಬೇಗೂರಿನಲ್ಲಿರುವ ಸಂತ್ರಸ್ತೆ ಮಾಲಿಕತ್ವದ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದ , ಈ ಮಧ್ಯೆ ಮನೆ ಓನರ್ ಸ್ನಾನದ ಕೋಣೆಯ ಕಿಟಕಿಯಲ್ಲಿ ಮೊಬೈಲ್ ಇಟ್ಟು ಅಶ್ಲೀಲ ದೃಶ್ಯ ಸೆರೆ ಹಿಡಿಯುತ್ತಿದ್ದ. ಅದನ್ನು ಗಮನಿಸಿದ ಮನೆ ಓನರ್ ಕೂಗಿಕೊಂಡಿದ್ದಾರೆ. ಆಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ನಂತರ ಪಕ್ಕದ ಮನೆಯಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬಯಲಾಗಿದೆ. ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ
