ಇಂತಹದ್ದೊಂದು ಸೀನ್​ ಶೂಟ್​ ಮಾಡೋದಕ್ಕೂ ಗುಂಡಿಗೆ ಗಟ್ಟಿ ಇರಬೇಕು! ವೈರಲ್ ರನ್​ ಆಗ್ತಿದೆ ಈ ದೃಶ್ಯ!

ಹಂಚಿಕೊಳ್ಳಿ
WhatsApp Facebook X Telegram
Landslide in Karathod Near Malappuram Blocks Nadukani-Parappanangadi Highway
Landslide in Karathod Near Malappuram Blocks Nadukani-Parappanangadi Highway

Landslide / ಮಲೆನಾಡು ಟುಡೆ ಸುದ್ದಿ / ವೈರಲ್​ ಸ್ಟೋರಿ / ಸದ್ಯ ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ಕಣ್ಣಿಗೆ ಏನು ಕಾಣತ್ತೋ ಅವೆಲ್ಲವನ್ನು ಮನುಷ್ಯ ಮೊಬೈಲ್​ನಲ್ಲಿ ಶೂಟ್ ಮಾಡಿಟ್ಟುಕೊಳ್ಳುತ್ತಾನೆ. ಹಾಗಿದ್ದೂ ಕೆಲವೊಂದು ದೃಶ್ಯಗಳು ಕಣ್ಣಿಗೆ ಬೀಳುವ ಮೊದಲೇ ನಡೆದು ಹೋಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕೇರಳದಲ್ಲಿ ಕುಸಿಧ ದರೆಯ ವಿಡಿಯೋ ಮಾಡುತ್ತಿರುವಾಗಲೇ ಅದರ ಮೇಲಿ ಧರೆ ಕುಸಿದ ದೃಶ್ಯವೊಂದು ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ರನ್ ಆಗುತ್ತಿದೆ.

ವಿಡಿಯೋ ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ಸಮೀಪದ ಕರತೋಡ್ ಪ್ರದೇಶದಲ್ಲಿ ಸಂಭವಿಸಿದ ಗುಡ್ಡ ಕುಸಿತದ್ದು ಎಂದು ಹೇಳಲಾಗಿದೆ. ಇಲ್ಲಿ ಧರೆಕುಸಿದ ಪರಿಣಾಮ ಪೊಲೀಸರು ಬ್ಯಾರಿಕೇಡ್ ಹಾಕಿ ಕಾವಲು ಕಾದಿದ್ದರು. ಇತ್ತ ಮೀಡಿಯಾ ಮಂದು ಚೂರು ಮುಂದೆ ಹೋಗಿ ಕುಸಿತದ ದೃಶ್ಯ ಸೆರೆ ಹಿಡಿಯುತ್ತಿದ್ದರು. ಜನರು ಬ್ಯಾರಿಕೇಡ್​ನಿಂದ ಈಚೆಗೆ ನಿಂತು ಮೊಬೈಲ್​ ನಲ್ಲಿ ದೃಶ್ಯ ಶೂಟ್ ಮಾಡುತ್ತಿದ್ದರು.

ಅಷ್ಟೊತ್ತಿಗೆ ದೊಡ್ಡ ಶಬ್ಧವೊಂದು ಕೇಳುತ್ತದೆ. ಇದನ್ನ ನೋಡಿದ ಪೊಲೀಸರೊಬ್ಬರು ಈಚೆ ಬನ್ನಿ ಎನ್ನುತ್ತಾ ಬ್ಯಾರಿಕೇಡ್ ದಾಟಿ ಬರುತ್ತಾರೆ. ಅಷ್ಟರಲ್ಲಿ ಅಕ್ಷರಶಃ ಪ್ರವಾಹವೆದ್ಧ ನದಿಯಂತೆ ನಿಂತ ತೆಂಗಿನ ಮರವನ್ನು ಸೇರಿಸಿಕೊಂಡೆ ಮಣ್ಣಿನ ಹೊಳೆ ಹರಿಯುತ್ತದೆ. ಸೆಕೆಂಡ್​ಗಳಲ್ಲಿ ಅಲ್ಲಿದ್ದವರೆಲ್ಲಾ ಚಿತ್ರೀಕರಣವೂ ಬೇಡ, ವಿಡಿಯೋವೂ ಬೇಡ, ಜೀವ ಉಳಿದರೆ ಸಾಕು ಎಂದು ಓಡುತ್ತಾರೆ.

ಕೆಲವೇ ಸೆಕೆಂಡ್​ಗಳ ಅಂಥರದಲ್ಲಿ ಮೀಡಿಯಾ ಮಂದಿ , ಪೊಲೀಸ್ ಮಂದಿ, ಸ್ಥಳೀಯರು ಬಚಾವ್ ಆದ ದೃಶ್ಯ, ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor