ಗವಟೂರು ತಾವರೆಕೆರೆಯಲ್ಲಿ ಸಿಕ್ಕಿತು ಶತಮಾನಗಳಷ್ಟು ಹಳೆಯ ವಿಶೇಷ ಅದ್ಭುತ! ಏನಿದು

ಹಂಚಿಕೊಳ್ಳಿ
WhatsApp Facebook X Telegram
Ancient Jain Tirthankara Idol Found in Gavaturo Village
Ancient Jain Tirthankara Idol Found in Gavaturo Village

Jain Tirthankara Idol ಮಲೆನಾಡು ಟುಡೆ ಸುದ್ದಿ / ರಿಪ್ಪನ್‌ಪೇಟೆ / ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು ಗ್ರಾಮದ ತಾವರೆಕೆರೆ ಪ್ರದೇಶದಲ್ಲಿ ಹೂಳೆತ್ತುವ ಕಾಮಗಾರಿಯ ಸಂದರ್ಭದಲ್ಲಿ ಪ್ರಾಚೀನ ಜೈನ ಮಠಕ್ಕೆ ಸೇರಿದ ಐತಿಹಾಸಿಕ ಅವಶೇಷ ಪತ್ತೆಯಾಗಿವೆ.

ಹಲವು ಶತಮಾನಗಳಷ್ಟು ಹಳೆಯದಾದ ಜೈನ ತೀರ್ಥಂಕರರ ಮೂರ್ತಿಗಳು ಹಾಗೂ ಪೀಠದ ಕುರುಹುಗಳು ಲಭ್ಯವಾಗಿರುವುದು ಆ ಭಾಗದ ಐತಿಹಾಸಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ. ಕಳೆದ ಶುಕ್ರವಾರ ಸಂಜೆ ತಾವರೆಕೆರೆ ಬಳಿ ಹಿಟಾಚಿ ಯಂತ್ರ ಬಳಸಿ ಮಣ್ಣು ತೆರವುಗೊಳಿಸುವಾಗ ಈ ಬೆಳವಣಿಗೆ ನಡೆದಿದೆ.

ಭೂಮಿಯ ಆಳದಲ್ಲಿ ಬೃಹತ್ ಗಾತ್ರದ ಕಲ್ಲಿನ ರಚನೆಗಳು ಹಾಗೂ ಕೆತ್ತನೆಯುಳ್ಳ ಶಿಲಾಮೂರ್ತಿಗಳು ಗೋಚರಿಸಿವೆ. ಪ್ರಾರಂಭದಲ್ಲಿ ಇವುಗಳನ್ನು ಕೇವಲ ಕಲ್ಲುಗಳೆಂದು ಭಾವಿಸಿದ್ದ ಕಾರ್ಮಿಕರು, ವಿಶಿಷ್ಟ ಕೆತ್ತನೆಗಳನ್ನು ಗಮನಿಸಿದ ಬಳಿಕ ಕಾಮಗಾರಿಯನ್ನು ನಿಲ್ಲಿಸಿದರು. ಈ ಕುರಿತು ಮಾಹಿತಿ ಪಡೆದ ತಕ್ಷಣ ಪಂಚಾಯಿತಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅನಂತರ ದೊರೆತ ಮೂರ್ತಿಗಳು ಹಾಗೂ ಅವಶೇಷಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ದೊರೆತಿರುವ ಮೂರ್ತಿಗಳು ಅಂದಾಜು 11 ರಿಂದ 12ನೇ ಶತಮಾನದ ಜೈನ ಧರ್ಮದ ತೀರ್ಥಂಕರರ ಮೂರ್ತಿಗಳಾಗಿರಬಹುದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಪ್ರಾಥಮಿಕವಾಗಿ ಅಭಿಪ್ರಾಯಪಟ್ಟಿದ್ದಾರೆ. ಮೂರ್ತಿಗಳ ಮೇಲಿನ ಲಾಂಛನಗಳು ಸ್ಪಷ್ಟವಾಗಿ ಗೋಚರಿಸದ ಕಾರಣ, ಇವು ನಿರ್ದಿಷ್ಟವಾಗಿ ಯಾವ ತೀರ್ಥಂಕರರಿಗೆ ಸೇರಿವೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಇತಿಹಾಸ ಸಂಶೋಧಕರು ವಿವರಿಸಿದ್ದಾರೆ.

Ancient Jain Tirthankara Idol Found in Gavaturo Village

  • ಲಭ್ಯವಾಗಿರುವ ಮೂರ್ತಿಯಲ್ಲಿ ತೀರ್ಥಂಕರರು ಪದ್ಮಾಸನ ಹಾಕಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿರುವ ಭಂಗಿ ಇದೆ.
  • ಪೀಠದ ಮೇಲೆ ಹೂವಿನ ಆಕೃತಿಗಳ ಕೆತ್ತನೆಗಳಿದ್ದು, ತಲೆಯ ಹಿಂಭಾಗದಲ್ಲಿ ಪ್ರಭಾವಳಿಯನ್ನು ಚಿತ್ರಿಸಲಾಗಿದೆ. ಇದು ಅಂದಿನ ಕಾಲದ ಶಿಲ್ಪಕಲೆಯ ಕೌಶಲ್ಯವನ್ನು ಪ್ರತಿಬಿಂಬಿಸುತ್ತದೆ.
  • ಕಾಲಾನುಕ್ರಮದಲ್ಲಿ ಮೂರ್ತಿಯ ಕೆಲವು ಭಾಗಗಳು ಹಾಗೂ ಕೆತ್ತನೆಗಳಿಗೆ ಹಾನಿಯಾಗಿದೆ.
  • ಇದೇ ಜಾಗದಲ್ಲಿ ಪೀಠ ಸ್ಥಾಪನೆಗೆ ಬಳಸಲಾಗಿದ್ದ ಕಂಬಗಳು ಹಾಗೂ ಇತರೆ ಕಲ್ಲಿನ ಅವಶೇಷಗಳು ಕೂಡ ದೊರೆತಿವೆ.
  • ಇದರಿಂದಾಗಿ ಹಿಂದೆ ಇಲ್ಲಿ ಜೈನ ಬಸದಿ ಅಥವಾ ಧಾರ್ಮಿಕ ಕೇಂದ್ರವೊಂದು ಅಸ್ತಿತ್ವದಲ್ಲಿತ್ತು ಎಂಬ ತೀರ್ಮಾನಕ್ಕೆ ಬರಲಾಗಿದೆ.

ತಜ್ಞರು ಹಾಗೂ ಪುರಾತತ್ವ ಇಲಾಖೆಯ ವತಿಯಿಂದ ಮತ್ತಷ್ಟು ವೈಜ್ಞಾನಿಕ ಅಧ್ಯಯನ ನಡೆಸಿದರೆ, ಇನ್ನು ಹೆಚ್ಚಿನ ಐತಿಹಾಸಿಕ ಕುರುಹುಗಳು ಹಾಗೂ ಕಟ್ಟಡದ ಅವಶೇಷಗಳು ಸಿಗುವ ಸಾಧ್ಯತೆಯಿದೆ . ಮಲೆನಾಡು ಭಾಗದಲ್ಲಿ ಜೈನ ಧರ್ಮವು ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ಇಂತಹ ಶಿಲ್ಪಕಲೆ ಹಾಗೂ ಬಸದಿಗಳ ಅವಶೇಷಗಳ ಸಂರಕ್ಷಣೆ ಮಾಡುವ ಅವಶ್ಯಕತೆ ಇದೆ.

ಸ್ಥಳೀಯರು

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor