ರಸ್ತೆಯಲ್ಲಿ ದರೋಡೆಗಿಳಿದಿದ್ದ ಶಿವಮೊಗ್ಗ ಮೂಲದ ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ!

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS 

ಶಿವಮೊಗ್ಗದ ಓರ್ವ ಯುವಕ ಸೇರಿ ಇಬ್ಬರು ಯುವಕರನ್ನು ದರೋಡೆ ಮಾಡುತ್ತಿದ್ದ ಆರೋಪದ ಮೇರೆಗೆ ಶಿರಸಿ ತಾಲ್ಲೂಕಿನ ಕಂಚಿಕೈ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಹನಗಳನ್ನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದವರನ್ನ ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು ಇಬ್ಬರಿಗೂ ಧರ್ಮದೇಟು ನೀಡಿದ್​ದಾರೆ.  

.

ಶಿರಸಿ ಮೂಲದ ಶಫಿ ,ಶಿವಮೊಗ್ಗ ಮೂಲದ ಇರ್ಪಾನ್  ಆರೋಪಿಗಳಾಗಿದ್ದಾರೆ.  ಕುಮಟಾಕ್ಕೆ ಆಗಮಿಸಿದ್ದ ಇಬ್ಬರು ಅಲ್ಲಿ ಬೈಕ್​ವೊಂದನ್ನ ಕದ್ದು ದೇವಿಮನೆ ಘಟ್ಟದಲ್ಲಿ ವಾಹನ ಸವಾರನನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದರು. ಅಲ್ಲಿಂದ  ಸಿದ್ದಾಪುರ -ಕಂಚಿಕೈ ಮಾರ್ಗದಲ್ಲಿ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತಿದ್ದ ಯುವಕನನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ಅಲ್ಲಿ ಸಾಗುತ್ತಿದ್ದ ಗ್ರಾಮಸ್ಥರು ಗಮನಿಸಿ ಜೋರಾಗಿ ಕಿರುಚುತ್ತಾ ಆರೋಪಿಗಳನ್ನ ಹಿಡಿದಿದ್ದಾರೆ. ಈ ವೇಳೆ ಓರ್ವ ಸಮೀಪದ ಕಾಡಿನೊಳಗೆ ಓಡಿ ಹೋಗಲು ಯತ್ನಿಸಿದ್ದ. ಅಲ್ಲಿಯು ಬಿಡದ ಜನರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಸಿದ್ದಾಪುರ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ.  


ಇನ್ನಷ್ಟು ಸುದ್ದಿಗಳು 


 

 

Leave a Comment