ಆಗಸ್ಟ್​ 31 ಕ್ಕೆ ವಿಮಾನ ಹಾರಾಟ! AIRPORT ಗೆ ಭೇಟಿಕೊಟ್ಟ ಸಂಸದ ಬಿ.ವೈ.ರಾಘವೇಂದ್ರ ನೀಡಿದ್ರು ಮಹತ್ವದ ಸುಳಿವು!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS 

ಶಿವಮೊಗ್ಗದ ಕನಸಿನ ವಿಮಾನ ಹಾರಾಟ ಇದೇ ಆಗಸ್ಟ್​  31ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿಕೊಟ್ಟ ಸಂಸದ ಬಿ.ವೈ.ರಾಘವೇಂದ್ರರವರು, ಸಿದ್ದತೆಗಳನ್ನು ಪರಿಶೀಲಿಸಿದ್ರು.  

ಆಗಸ್ಟ್​ 31 ಕ್ಕೆ ಹಾರಾಟ 

ನಿಲ್ದಾಣ ವೀಕ್ಷಣೆ ಬಳಿಕ ಮಾತನಾಡಿದ ಸಂಸದರು,  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಶ್ರಮದಿಂದ ಕನಸು ನನಸಾಗುತ್ತಿದೆ. ಆಗಸ್ಟ್ 31ಕ್ಕೆ ವಿಮಾನ ಹಾರಾಟ ಅಧಿಕೃತವಾಗಿ ಆರಂಭಗೊಳ್ಳಲಿದೆ. ಅಂದು ಬೆಳಿಗ್ಗೆ 9-50ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ 11-05ಕ್ಕೆ ಶಿವಮೊಗ್ಗ ಸೇರುವುದು ಎಂದು ತಿಳಿಸಿದ್ಧಾರೆ. 

ಪಕ್ಷಾತೀತ ಸ್ವಾಗತ 

ಶಿವಮೊಗ್ಗಕ್ಕೆ ಮೊದಲ ಪ್ರಯಾಣಿಕ ವಿಮಾನ ಬಂದಿಳಿಯುವಾಗ  ಮಾಜಿ ಸಿಎಂ ಬಿಎಸ್​ವೈ,  ಸಚಿವ ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಜಿಲ್ಲೆ ಎಲ್ಲಾ ಶಾಸಕರು ಮುಖಂಡರು, ಅಧಿಕಾರಿಗಳು ಉಪಸ್ತಿತರಿರಲಿದ್ಧಾರೆ ಎಂದು ಮಾಹಿತಿ ನೀಡಿದ ಬಿ.ವೈ.ರಾಘವೇಂದ್ರರವರು,   ವಾಟರ್ ಸೆಲ್ಯೂಟ್ ವಿಮಾನವನ್ನು ಸ್ವಾಗತಿಸಲಾಗುತ್ತದೆ ಎಂದು ವಿವರಿಸಿದ್ದಾರೆ.  

ಆನ್​ ಲೈನ್ ಬುಕ್ಕಿಂಗ್​ ನಲ್ಲಿ ಡಿಮ್ಯಾಂಡ್​ 

ವಿಮಾನ ಪ್ರಯಾಣಕ್ಕೆ ಆನ್ ಲೈನ್ ಬುಕ್ಕಿಂಗ್ ನಲ್ಲಿ ಮುಂದಿನ ಒಂದು ತಿಂಗಳ ತನಕ ಟಿಕೆಟ್ ಸಿಗುತ್ತಿಲ್ಲ.  ಟಿಕೆಟ್​ ಗೆ ಡಿಮ್ಯಾಂಡ್ ಇದ್ದು,  ಪ್ರಯಾಣಕ್ಕೆ ಅನುಗುಣವಾಗಿ ಬೆಲೆ ಹೆಚ್ಚು ಅಥವಾ ಕಡಿಮೆ ಆಗುತ್ತದೆ ಎಂದು ಮಾಹಿತಿ ನೀಡಿದ ಬಿವೈಆರ್​, ಈ ಮೊದಲು ಟಿಕೆಟ್  2900 ರೂ.ಗೆ ಸಿಕ್ಕಿತ್ತು. ಅದು ನಂತರ  ನಾಲ್ಕು ಸಾವಿರ ದಾಟಿತು ಎಂದು ಮಾಹಿತಿ ನೀಡಿದ್ರು. 

ಸದ್ಯದಲ್ಲಿ ದೆಹಲಿಗೆ ವಿಮಾನ!

ಮುಂದಿನ ದಿನಗಳಲ್ಲಿ ಗೋವಾ, ದೆಹಲಿ, ಹೈದರಾಬಾದ್​ಗೆ ವಿಮಾನ ಹಾರಾಟ ನಡೆಸಲಿದ್ದು,   ಕೆಲವೇ ವರ್ಷಗಳಲ್ಲಿ ಶಿವಮೊಗ್ಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದು ಭವಿಷ್ಯ ನುಡಿದ್ರು 

ಕುವೆಂಪು ವಿಮಾನ ನಿಲ್ದಾಣ

ಬಿ.ಎಸ್. ಯಡಿಯೂರಪ್ಪನವರ ಆಶಯದಂತೆ ಕೇಂದ್ರ ಸರ್ಕಾರ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದೆ ಎಂದು ತಿಳಿಸಿದ ಬಿವೈ ರಾಘವೇಂದ್ರರವರು, ವಿಮಾನ ಯಾನಕ್ಕೆ ಪ್ರಯಾಣಿಕರನ್ನು ಕಳಿಸುವವರಿಗೆ, ನಿಲ್ಧಾಣದ ಮುಂಭಾಗದವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದಿದ್ಧಾರೆ. 

ಡಿಸೆಂಬರ್​ನಿಂದ ನೈಟ್ ಲ್ಯಾಂಡಿಂಗ್?

 

ಇನ್ನೂ ರಾತ್ರಿ ಲ್ಯಾಂಡಿಂಗ್ ಬಗ್ಗೆ ಮುಂದಿನ  ಡಿಸೆಂಬರ್‌ ನಲ್ಲಿ ಅಂತಿಮ ನಿರ್ಧಾರ ಕೈಗೊಂಡು, ಆ ತಿಂಗಳಿನಲ್ಲಿಯೇ ನೈಟ್ ಲ್ಯಾಂಡಿಂಗ್  ಆರಂಭವಾಗುವ ನಿರೀಕ್ಷೆ ಇದೆ ಎಂದು ಮಾಹಿತಿ ಹಂಚಿಕೊಂಡರು


ಇನ್ನಷ್ಟು ಸುದ್ದಿಗಳು 


 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor