ಮಟಮಟ ಮಧ್ಯಾಹ್ನ ನಡೆದಿತ್ತು 2 ಕಳ್ಳತನ | ಗೋಪಾಳ, ಸೂಳೆಬೈಲ್‌, ಜೆಪಿನಗರದ ಕಳ್ಳರಿಗೆ ಮಾಳೂರು ಪೊಲೀಸರ ಶಾಕ್

ಹಂಚಿಕೊಳ್ಳಿ
WhatsApp Facebook X Telegram
ಮಟಮಟ ಮಧ್ಯಾಹ್ನ ನಡೆದಿತ್ತು 2 ಕಳ್ಳತನ | ಗೋಪಾಳ, ಸೂಳೆಬೈಲ್‌, ಜೆಪಿನಗರದ ಕಳ್ಳರಿಗೆ ಮಾಳೂರು ಪೊಲೀಸರ ಶಾಕ್

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 16, 2025 ‌‌ ‌‌

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ಮಾಳೂರು ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಳಸುಗುಂಡಿ ಗ್ರಾಮದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಮೂಲಕ ಒಟ್ಟು ಎರಡು ಪ್ರಕರಣಗಳನ್ನು ಪೊಲೀಸರು ಇತ್ಯರ್ಥ ಪಡಿಸಿದ್ದಾರೆ.

ಏನಿದು ಘಟನೆ 

ದಿನಾಂಕ:20-01-2025 ರಂದು ಮಧ್ಯಾಹ್ನದ ಹೊತ್ತಿಗೆ ಕಳಸಗುಂಡಿಯಲ್ಲಿರುವ ಮನೆಯೊಂದರಲ್ಲಿ ಹಂಚನ್ನು ತೆಗೆದು ಒಳಗೆ ನುಗ್ಗಿದ್ದ ಕಳ್ಳರು ಬೀರುವಿನಲ್ಲಿದ್ದ 4,93,000 ರೂಪಾಯಿ ಬೆಲೆ ಬಾಳುವ ಬೆಳ್ಳಿ, ಬಂಗಾರದ ಒಡವೆಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ 331(3), 305 ಬಿ.ಎನ್.ಎಸ್. ಅಡಿಯಲ್ಲಿ ಕೇಸ್‌ ದಾಖಲಾಗಿತ್ತು. 

ಇದೇ ರೀತಿ ಇತ್ತೀಚೆಗೆ ಅಂದರೆ, ದಿನಾಂಕ:03-03-2025 ರಂದು ಮದ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ನಿಡಗಳಲೆಯಲ್ಲಿ ಮನೆಯೊಂದರ ಬೀಗ ಮುರಿದು ಬೆಡ್‌ ರೂಂನಲ್ಲಿದ್ದ ಗ್ರಾಡ್ರೆಜ್‌ನಲ್ಲಿಟ್ಟಿದ್ದ 2,54,500 ರೂಪಾಯಿ ಬೆಲೆಯ ಬಂಗಾರ, ಬೆಳ್ಳಿಯ ವಸ್ತು ಹಾಗೂ ನಗದು ಕಳ್ಳತನ ಮಾಡಲಾಗಿತ್ತು. ಎರಡು ಪ್ರಕರಣಗಳನ್ನು ತನಿಖೆಗೆ ಕೈಗೆತ್ತಿಕೊಂಡ ಪೊಲೀಸರು ಶಿವಮೊಗ್ಗದ ಗೋಪಾಳ, ಸೂಳೆಬೈಲ್‌ ಹಾಗೂ ಜೆಪಿ ನಗರದ ನಿವಾಸಿಗಳನ್ನು ಅರೆಸ್ಟ್‌ ಮಾಡಿದ್ದಾರೆ. 

ಬಂಧಿತರು

1) ಅಬ್ದುಲ್ ಶಫೀಕ್ ಬಿನ್ ಅಬ್ದುಲ್ ರಶೀದ್ 21 ವರ್ಷ. ತರಕಾರಿ ವ್ಯಾಪಾರಿ: ಶ್ರೀರಾಮನಗರ. ಗೋಪಾಳ. ಶಿವಮೊಗ್ಗ.

2) ಖಲೀಲ್ ಖಾನ್ ಬಿನ್ ಆಸೀಫ್ ಖಾನ್ 24 ವರ್ಷ. ಅಲ್ಯೂಮಿನಿಯಂ ಪ್ಯಾಬ್ರಿಕೇಷನ್ ಕೆಲಸ: ಸೂಳೆಬೈಲ್ 10ನೇ ತಿರುವು, ಬಲ ಭಾಗ ಶಿವಮೊಗ್ಗ.

3) ಸೈಯದ್ ಜಾವೀದ್ @ ಶೋಯೆಬ್ ಬಿನ್ ಸೈಯದ್ ಅಸ್ಟರ್, 23 ವರ್ಷ. ಅಲ್ಯೂಮಿನಿಯಂ ಪ್ಯಾಬ್ರಿಕೇಷನ್ ಕೆಲಸ ವಾಸ ಜೆ.ಪಿ. ನಗರ. 1ನೇ ತಿರುವು. ಶಿವಮೊಗ್ಗ ಟೌನ್.

ಇನ್ನೂ ಬಂಧಿತರಿಂದ ಕೆಎ 14 ಹೆಚ್.ಬಿ 7324 ನೊಂದಣಿಯ ಸುಜುಕಿ ಆಕ್ಸೆಸ್ ಸ್ಕೂಟರ್ ಅಂದಾಜು ಮೌಲ್ಯ 80.000/- ರೂಪಾಯಿ, 72 ಗ್ರಾಂ ತೂಕದ ಬಂಗಾರದ ಒಡವೆಗಳು ಅಂದಾಜು ಮೌಲ್ಯ 5,50,000/- ರೂಪಾಯಿ, 265 ಗ್ರಾಂ ತೂಕದ ಬೆಳ್ಳಿಯ ಒಡವೆಗಳು ಅಂದಾಜು ಮೌಲ್ಯ 22,000/- ರೂಪಾಯಿಗಳು ಒಟ್ಟು ಮೌಲ್ಯ 6,52,000/- ರೂಪಾಯಿಯ ಬೆಳ್ಳಿ, ಬಂಗಾರದ ಒಡವೆಗಳು ಹಾಗೂ ಸ್ಕೂಟರನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor