ಕಾಡಂಚಿನ ಹೊಲಗದ್ದೆಗಳ ಮೇಲೆ ಹಾರಿದ ಡ್ರೋಣ್‌ ! ಆತಂಕದಲ್ಲಿದ್ದವರಿಗೆ ಹೆಚ್ಚಿದ ಅನುಮಾನ! ಆಮೇಲೆ ಎನಾಯ್ತು ಓದಿ

ಹಂಚಿಕೊಳ್ಳಿ
WhatsApp Facebook X Telegram
ಕಾಡಂಚಿನ ಹೊಲಗದ್ದೆಗಳ ಮೇಲೆ ಹಾರಿದ ಡ್ರೋಣ್‌ ! ಆತಂಕದಲ್ಲಿದ್ದವರಿಗೆ ಹೆಚ್ಚಿದ ಅನುಮಾನ! ಆಮೇಲೆ ಎನಾಯ್ತು ಓದಿ

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 15, 2025 ‌‌ ‌‌

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಕಳೆದೊಂದು ವಾರದಿಂದ ಡ್ರೋಣ್‌ ಕ್ಯಾಮರಾ ಹಾರಾಟ ನಡೆಸ್ತಿರುವುದು ಸ್ಥಳೀಯರ ಅನುಮಾನಕ್ಕೆ ಕಾರಣವಾಗಿದ್ದು, ಆ ಬಳಿಕ ಡ್ರೋಣ್‌ ಬಗ್ಗೆ ತಹಶೀಲ್ದಾರ್‌ಗೆ ದೂರು ಸಲ್ಲಿಸಲಾಗಿದೆ. 

ಏನಿದು ಪ್ರಕರಣ, 

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಡ್ರೋಣ್‌ ಹಾರಿಸಿ ಚಿತ್ರೀಕರಣ ಮಾಡುವುದಾದರೆ, ಆಯಾ ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಡ್ರೋಣ್‌ ಹಾರಿಸಬೇಕು ಎಂಬ ನಿಯಮವಿದೆ. ಆದರೆ ಸಾಗರ ಭಾಗದ ಗ್ರಾಮಗಳಲ್ಲಿ ಅಲ್ಲಿನ ಸ್ತಳೀಯ ಆಡಳಿತಗಳಿಗೆ ಮಾಹಿತಿ ಇಲ್ಲದೆ ಕಾಡಂಚಿನ ಗ್ರಾಮಗಳಲ್ಲಿ ಡ್ರೋಣ್‌ ಹಾರಾಟ ನಡೆಸಿದೆ. ಇದರಿಂದ ಆತಂಕಗೊಂಡ ಸ್ಥಳೀಯರು ಅಕ್ರಮ ಸಾಗುವಳಿ ಪತ್ತೆಗೆ ಈ ರೀತಿ ಡ್ರೋಣ್‌ ಹಾರಾಟ ನಡೆಸ್ತಿದ್ದಾರಾ ಎಂಬ ಅನುಮಾನಕ್ಕೆ ಬಂದಿದ್ದಾರೆ. ಅಲ್ಲದೆ ಈ ಸಂಬಂಧ ಸಾಗರ ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದಾರೆ. 

ತಹಶೀಲ್ದಾರ್‌ ತನಿಖೆ

ಈ ಬಗ್ಗೆ ತಹಶೀಲ್ದಾರ್‌ ಪರಿಶೀಲನೆ ನಡೆಸಿದಾಗ, ಕಕೇಂದ್ರ ಸರ್ಕಾರದ ಪ್ರಾಪರ್ಟಿ ಕಾರ್ಡ್ ಯೋಜನೆ ಅಡಿ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಕ್ಷಾ ಅಡಿ ನಗರ ಪ್ರದೇಶದಲ್ಲಿ ಉಪಗ್ರಹ ಆಧಾರಿತ ಚಿತ್ರಗಳನ್ನು ಆಧರಿಸಿ ಡ್ರೋಣ್ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಈ ಸಂಬಂಧ ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರು ಡ್ರೋಣ್‌ ಸಮೀಕ್ಷೆ ನಡೆಸುವುದಕ್ಕೂ ಮೊದಲು ಆಯಾ ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿ ಪ್ರಕರಣಕ್ಕೆ ಸುಖ್ಯಾಂತ್ಯ ನೀಡಿದರು

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor