ತೀರ್ಥಹಳ್ಳಿಗೆ ನೂತನ ಡಿವೈಎಸ್ಪಿ ನೇಮಕ ಸೇರಿದಂತೆ ಟಾಪ್‌ 3 ಚಟ್‌ ಪಟ್‌ ಸುದ್ದಿ

ಹಂಚಿಕೊಳ್ಳಿ
WhatsApp Facebook X Telegram
ತೀರ್ಥಹಳ್ಳಿಗೆ ನೂತನ ಡಿವೈಎಸ್ಪಿ ನೇಮಕ ಸೇರಿದಂತೆ ಟಾಪ್‌ 3 ಚಟ್‌ ಪಟ್‌ ಸುದ್ದಿ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 8, 2025

ತೀರ್ಥಹಳ್ಳಿಯ ಮಾಜಿ ಡಿವೈಎಸ್‌ಪಿ ಗಜಾನನ ವಾವನ ಸುತಾರರವರು ವರ್ಗಾವಣೆಯಾದ ಹಿನ್ನಲೆ ತೀರ್ಥಹಳ್ಳಿಗೆ ನೂತನ ಡಿವೈಎಸ್‌ಪಿ ಆಗಿ ಅರವಿಂದ್‌ ಕಲಗುಚ್ಚಿ ನೇಮಕಗೊಂಡಿದ್ದಾರೆ. ಕಾರ್ಕಳದಲ್ಲಿ ಡಿವೈಎಸ್‌ಪಿ  ಕಾರ್ಯನಿರ್ವಹಿಸುತ್ತಿದ್ದ  ಅರವಿಂದ್‌ ಕಲುಗುಚ್ಚಿ ಇದೀಗ ತೀರ್ಥಹಳ್ಳಿಗೆ ನೇಮಕಗೊಂಡಿದ್ದು, ಸದ್ಯದಲ್ಲೆ ತಾಲೂಕಿನಲ್ಲಿ ವೃತ್ತಿ ಆರಂಭಿಸಲಿದ್ದಾರೆ.

ಸುದ್ದಿ :02 ಡಿಸಿಪಿ ಕಚೇರಿ ಮುಂದೆ ವೀಲಿಂಗ್ ಆರೋಪಿ ಅರೆಸ್ಟ್‌

ರೌಡಿ ಶೀಟರ್‌ ಒಬ್ಬ ಡಿಸಿಪಿ ಕಚೇರಿಯ ಬಳಿ ಬೈಕ್‌ನಲ್ಲಿ ಅಪಾಯಕಾರಿ ವೀಲಿಂಗ್‌ ಮಾಡಿದ್ದು ಮಾತ್ರವಲ್ಲದೆ ಅಲ್ಲದೆ ಲಾಂಗ್ ಮಚ್ಚುಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದು, ಆತನನ್ನು  ಬೆಂಗಳೂರಿನ ಶಿವಾಜಿನಗರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.  ಸಿದ್ದಿಕಿ ಅಲಿಯಾಸ್ ಬರ್ನಲ್ ಬಂದಿತ ಆರೋಪಿಯಾಗಿದ್ದಾನೆ.

ಸುದ್ದಿ : 03 ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾಗಿ  ಶಕುಂತಲಾ ಚಂದ್ರಶೇಖರ್ ಅಧಿಕಾರ ಸ್ವೀಕಾರ

ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ 25 ವರ್ಷಗಳಿಂದ ನಿರಂತರವಾಗಿ ವಿವಿಧ ಪ್ರಮುಖ ಹುದ್ದೆಯಲ್ಲಿ ಸೇವೆ ಸಲ್ಲಿಸಿ ವೃತ್ತಿಯಲ್ಲಿ ಪ್ರಸಿದ್ಧ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶಕುಂತಲಾ ಚಂದ್ರಶೇಖರ್ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.

ನಗರದ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಎಲ್ಲ ಹಿರಿಯರ ಸಲಹೆ ಸಹಕಾರದೊಂದಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ನ ಎಲ್ಲ ಕಾರ್ಯಕ್ರಮಗಳನ್ನು ಕ್ರೀಯಾಶೀಲವಾಗಿ ನಡೆಸಿಕೊಂಡು ಹೋಗಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

SUMMARY | Aravind Kalaguchi has been appointed as the new DySP of Thirthahalli following the transfer of former DySP Gajanana Vavana Sutara.

KEYWORDS | Aravind Kalaguchi, Thirthahalli, DySP,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor