ಅಳಿದು ಉಳಿದವರ ಕಥೆಯಲ್ಲಿ ಲ್ಯಾಂಡ್ ಲಾರ್ಡ್ ಆದ ಸ್ಯಾಂಡಲ್ವುಡ್ ಸಲಗ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 20, 2025

ದುನಿಯಾ ವಿಜಯ್ ಅಭಿನಯಿಸುತ್ತಿರುವ  29 ನೇ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರಕ್ಕೆ ಲ್ಯಾಂಡ್ ಲಾರ್ಡ್ ಎಂದು ಹೆಸರಿಡಲಾಗಿದೆ.

ಈ ಹಿಂದೆ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ್ದ ಭೀಮ ಚಿತ್ರ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದರ ನಡುವೆ ದುನಿಯಾ ವಿಜಯ್ ಜಡೇಶ್ ಕೆ ಹಂಪಿ ನಿರ್ದೇಶನದ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ್ದರು. ಇದೀಗ ದುನಿಯಾ ವಿಜಯ್ ಹುಟ್ಟುಹಬ್ಬದ ಹಿನ್ನಲೆ  ಲ್ಯಾಂಡ್ ಲಾರ್ಡ್ ಟೈಟಲ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

ಅಳಿದು ಉಳಿದವರ ಕಥೆಯಲ್ಲಿ ಲ್ಯಾಂಡ್ ಲಾರ್ಡ್ ಆದ ಸ್ಯಾಂಡಲ್ವುಡ್ ಸಲಗ

ಈ ಪೋಸ್ಟರ್ ನಲ್ಲಿ ದುನಿಯಾ ವಿಜಯ್ ಸುತ್ತಲೂ ಬೆಂಕಿಯ ನಡುವೆ ಕೊಡಲಿ ಹಿಡಿದು ರಕ್ತ ಸಿಕ್ತವಾದ ಬಟ್ಟೆಯಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‌ನ್ನು ಗಮನಿಸಿದಾಗ ದುನಿಯಾ ವಿಜಯ್ ಪಕ್ಕ ರೈತರ ಶೈಲಿಯಲ್ಲಿ ಪಂಚೆ ಉಟ್ಟು ರೈತರ ಪರ ಹೋರಾಟ ಮಾಡುವ ಹೋರಾಟಗಾರನಾಗಿ ಕಾಣಿಸುತ್ತಾರೆ. ಆದ್ರೆ ಲ್ಯಾಂಡ್ ಲಾರ್ಡ್ ಅಂದರೆ ಕನ್ನಡದಲ್ಲಿ ಜಮೀನ್ದಾರ ಎಂಬ ಅರ್ಥವಿದ್ದು, ದುನಿಯಾ ವಿಜಯ್ ಈ ಚಿತ್ರದಲ್ಲಿ ಜಮೀನ್ದಾರನ ಅಥವಾ ಜಮೀನ್ದಾರರ ವಿರುದ್ಧ  ಹೋರಾಟ ಮಾಡುವ ಹೋರಾಟಗಾರನ ಎಂಬುವುದು ಚಿತ್ರ ಬಿಡುಗಡೆಯಾದ ನಂತರವೇ ತಿಳಿಯಲಿದೆ.

ಈ ಚಿತ್ರದ ನಿರ್ದೇಶಕ ಜಡೇಶ್ ಕೆ ಹಂಪಿ ಈ ಹಿಂದೆ ಕಾಟೇರ ಚಿತ್ರಕ್ಕೆ ತರುಣ್ ಸುಧೀರ್ ಜೊತೆ ಸೇರಿ ಕತೆ ಬರೆದಿದ್ದರು. ಒಂದು ಉತ್ತಮ ಸಾಮಾಜಿಕ ಸಂದೇಶದೊಂದಿಗೆ ಬಿಡುಗಡೆಯಾಗಿದ್ದ ಆ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇದಾದ ನಂತರ ನಿರ್ದೇಶಕ ಜಡೇಶ್ ಹಂಪಿ ಮೇಲೆ ನೀರೀಕ್ಷೆ ಹೆಚ್ಚಾಗಿತ್ತು. ಇದೀಗ ಅದೇ ಮಾದರಿಯ ಕಥೆಯನ್ನು ಜಡೇಶ್ ಕೆ ಹಂಪಿ ಹೇಳಲು ಹೊರಟಿದ್ದಾರೆ. ಕೆ ವಿ ಸತ್ಯ ಪ್ರಕಾಶ್  ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಜಿನೀಶ್ ಬಿ ಲೋಕಲ್ ಸಂಗೀತ ಸಂಯೋಜಿಸಲಿದ್ದಾರೆ

SUMMARY | The title of Duniya Vijay’s 29th film has been unveiled and the film has been titled Land Lord

 

KEYWORDS  |  Duniya Vijay, LandLord, kannada movie,

 

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor