SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಶಿವಮೊಗ್ಗದಲ್ಲಿ ಸಂಚಾರಿ ಪೊಲೀಸ್ ಟೀಂ ತುಂಬಾನೇ ಆಕ್ಟೀವ್ ಆಗಿರುತ್ತದೆ. ಈಗಾಗಲೇ ದುಬಾರಿ ಫೈನ್‌ಗೆ ಹೆಸರುವಾಸಿಯಾಗಿರುವ ಸಂಚಾರಿ ಪೊಲೀಸರು ಇದೀಗ ಮತ್ತೊಂದು ಕ್ರಮದ ಮೂಲಕ ಸುದ್ದಿಯಾಗಿದ್ದಾರೆ. ಈ ಕ್ರಮ ಸಾರ್ವಜನಿಕರ ದೃಷ್ಟಿಯಲ್ಲಿ ಸರಿಯಾಗಿಯೇ ಕಾಣುತ್ತಿದೆಯಾದರೂ, ಕೆಲವರು ಮಾತ್ರ ಹೀಗೆ ಮಾಡಬಾರದಿತ್ತು ಎನ್ನುತ್ತಿದ್ದಾರೆ.
ಏನಿದು ಹೊಸ ಕ್ರಮ
ಇವತ್ತು ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ PSI ತಿರುಮಲೇಶ್ ಹಾಗೂ ಮೋಹನ್ ಎ.ಎಸ್.ಐ., ಪ್ರವೀಣ್ ಪಾಟೀಲ್ ಸಿ.ಹೆಚ್.ಸಿ ಮತ್ತು ಪಿಸಿಯವರಾದ ಪ್ರಶಾಂತ್, ಗಿರೀಶ್ ಹರೀಶ್, ದಿನೇಶ್ ತಂಡ ಕಿವಿ ಕಿತ್ತೋಗುವ ರೀತಿಯಲ್ಲಿ ಹಾರ್ನ್ ಬಳಸುವ ಬಸ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಈ ನಿಟ್ಟಿನಲ್ಲಿ ಶಾಲಾ ಬಸ್ ಹಾಗೂ ಸಿಟಿ ಬಸ್‌ಗಳನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದ ತಂಡ, ಈ ವೇಳೆ shill horn ಸೌಂಡ್ ಹೇಗೆ ಜನರಿಗೆ ತೊಂದರೆ ಉಂಟು ಮಾಡುತ್ತದೆ ಎನ್ನುವುದನ್ನ ತೋರಿಸುವ ಸಲುವಾಗಿ, ಬಸ್ ಡ್ರೈವರ್‌ಗಳನ್ನು ಹಾರ್ನ್ ಬಳಿ ಕೂರಿಸಿ ಹಾರ್ನ್ ಹೊಡೆದಿದ್ದಾರೆ. ಅವರ ಮೂಲಕವೇ ಹಾರ್ನ್ ಸೌಂಡ್ ಕರ್ಕಶವಾಗಿದೆ , ಅದನ್ನು ಕೇಳಲು ಆಗುವುದಿಲ್ಲ. ಜನರಿಗೂ ಇದೇ ರೀತಿ ತೊಂದರೆ ಆಗುತ್ತದೆ ಎಂದು ವಿಡಿಯೋ ಮೂಲಕ ಹೇಳಿಸಿದ್ದಾರೆ. ಆ ಬಳಿಕ ಕರ್ಕಶ ಹಾರ್ನ್ ಬಳಸಿದ್ದಕ್ಕೆ ಫೈನ್ ಹಾಕಿದ್ದಾರೆ.
ಖಾಸಗಿ ಬಸ್ ನಿಲ್ದಾಣ ಮತ್ತು ಇತರೆ ಸ್ಥಳಗಳಲ್ಲಿ ಕರ್ಕಶವಾಗಿ ಶಬ್ಧ (shill horn) ಮಾಡುತ್ತಿದ್ದಂತಹ ವಾಹನಗಳ ತಪಾಸಣೆ ನಡೆಸಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರ ಕ್ರಮ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದೊಳ್ಳೆ ಕೆಲಸ ಎನ್ನುತ್ತಿದ್ದಾರೆ.
Wyświetl ten post na Instagramie
SUMMARY | The Shimoga West Traffic Police Station took action by sounding the shill horn to the bus drivers who used the shill horn.
KEY WORDS | Shimoga West Traffic Police Station, action to shill horn, action against city bus drivers who used shill hoŗn