ನೀರಿನ ಸೆಳೆತ ! ಈಜಲು ಹೋದವರು ನೀರು ಪಾಲು! ಮೂವರ ಸಾವು! ಜಾಗ್ರತೆಯಿರಲಿ!

Three people who went for a swim in Malnad drowned in water

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Three people who went for a swim in Malnad drowned in water

KARNATAKA NEWS/ ONLINE / Malenadu today/ May 20, 2023 SHIVAMOGGA NEWS

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನದಿಯಲ್ಲಿ ಈಜಲು ಹೋಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ತಾಲೂಕಿನ ಹೊರಬೈಲು ಬುಕ್ಲಾಪುರದಲ್ಲಿ ಈ ಘಟನೆ ನಡೆದಿದ್ದು, ಶುಕ್ರವಾರ  ಮೃತದೇಹ ಪತ್ತೆಯಾಗಿದೆ. 

ಹೊರಬೈಲಿನಲ್ಲಿ  ಮರಗೆಲಸ ಮಾಡುತ್ತಿದ್ದ ವೆಂಕಟೇಶ ಆಚಾರ್ಯ ಎಂಬವರ ಮಗ  ಮಾಧವ್‌  ನದಿಯಲ್ಲಿ ಈಜಲು ತನ್ನ ಸ್ನೇಹಿತರ ಜೊತೆ ತೆರಳಿದ್ದಾನೆ. ಈ ವೇಳೇ ನೀರಿನ ಸೆಳೆತದಲ್ಲಿ ಮಾಧವ್ ಮುಳಗಿದ್ದಾನೆ. ಆತನ ಮೃತದೇಹ ನಿನ್ನೆ ಪತ್ತೆಯಾಗಿದೆ. ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾಗಿದೆ.

ಶೃಂಗೇರಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

ಇನ್ನೊಂದೆಡೆ ಅತ್ತ ಶೃಂಗೇರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸ್ಟೂಡೆಂಟ್ಸ್ ನೀರುಪಾಲಾಗಿದ್ದಾರೆ. ಈ ಘಟನೆ  ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪ ನಡೆದಿದೆ.  ಇಲ್ಲಿನ  ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಹಾಗೂ ರಕ್ಷಿತ್ ಮೃತ ಪಟ್ಟವರು. 

ಸುಂಕದಮಕ್ಕಿ ತೂಗುಸೇತುವೆ  ಸಮೀಪ  ಇವರು ಈಜಲು ತೆರಳಿದ್ದಾರೆ. ಈ ವೇಳೆ ರಕ್ಷಿತ್ ಮುಳುಗುತ್ತಿರುವುದನ್ನ ಗಮನಿಸಿದ ಪ್ರಜ್ವಲ್​ ಆತನನ್ನ ಹಿಡಿಯಲು ಹೋಗಿದ್ದಾನೆ. ಈ ವೇಳೆ ಇಬ್ಬರು ನಿಯಂತ್ರಣ ಕಳೆದುಕೊಂಡು ನೀರಿನಲ್ಲಿ ಮುಳುಗಿದ್ದಾರೆ. 

ಕೆರೆಗೆ ಹಾರಿದ ನಾಲ್ಕು ಅವಳಿ ಜವಳಿ ಮಕ್ಕಳ ತಾಯಿ! ಘಟನೆಗೆ ಕಾರಣವಾಗಿದ್ದೇನು?

ತೀರ್ಥಹಳ್ಳಿ/ ತಾಲ್ಲೂಕಿನ ಮೇಲಿನ ಕರುವಳ್ಳಿಯಲ್ಲಿ ಅವಳಿ ಜವಳಿ ಮಕ್ಕಳ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ಧಾರೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಆದಾಗ್ಯು ಪತಿಯ ಸಾಲದ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. 

ಕಾರು-ಒಮಿನಿ ಡಿಕ್ಕಿ! ತಲೆಕೆಳಗಾಗಿ ಬಿದ್ದ ವಾಹನ! ಘಟನೆ ತಡವಾಗಿ ಬೆಳಕಿಗೆ

ಮೇಲಿನಕುರುವಳ್ಳಿಯಲ್ಲಿರುವ ಕೆರೆಗೆ  ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಅವರನ್ನ 36 ವರ್ಷದ ಶೃತಿ ಎಂದು ಗುರುತಿಸಲಾಗಿದೆ.  ಇವರಿಗೆ ನಾಲ್ಕು  ಅವಳಿ ಜವಳಿ ಮಕ್ಕಳು.

ಮೇಯಲು ಹೋಗಿದ್ದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು!

ಸದ್ಯ ಘಟನೆ ಸಂಬಂದ ಪ್ರಕರಣ ದಾಖಲಿಸಿಕೊಂಡಿರುವ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಪೊಲೀಸರು,  ಮೃತಳ ಪತಿಯನ್ನು ವಶಕ್ಕೆ ಪಡೆದಿದ್ದು ಮುಂದಿನ ತನಿಖೆ ನಡೆಸ್ತಿದ್ದಾರೆ. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor