8 ಗ್ರಾಂ ಚಿನ್ನ ಕದ್ದಿದ್ದಕ್ಕೆ ಕೋರ್ಟ್​ ಕೊಟ್ಟ ಶಿಕ್ಷೆ ಎಷ್ಟು ಗೊತ್ತಾ? ಭದ್ರಾವತಿ ಕೇಸ್ ಫೈಲ್​!

KARNATAKA NEWS/ ONLINE / Malenadu today/ May 20, 2023 SHIVAMOGGA NEWS

ಭದ್ರಾವತಿ / ಮನೆಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ ಹಂಚು ತೆಗೆದು ಬಂಗಾರದ ಒಡವೆ, ನಗದು ಹಣವನ್ನು ಕಳ್ಳತನ ಮಾಡಿದ ಆರೋಪಿಗೆ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಲಯ ಸಾದಾ ಸಜೆ ಮತ್ತು ದಂಡ, ದಂಡ ತುಂಬಲು ತಪ್ಪಿದಲ್ಲಿ ಹೆಚ್ಚುವರಿ ಸಾದಾ ಸಜೆ ಅನುಭವಿಸುವಂತೆ ಆದೇಶಿಸಿ ತೀರ್ಪು ನೀಡಿದೆ. 

ಮೇಯಲು ಹೋಗಿದ್ದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು!

ಏನಿದು ಪ್ರಕರಣ

ತಾಲೂಕಿನ ನಾಗತಿಬೆಳಗಲು ನಿವಾಸಿ ಮಹೇಶ್ ನಾಯ್ಕ ಯಾನೆ ಮಹೇಶ ಶಿಕ್ಷೆಗೊಳಗಾದ ಆರೋಪಿಮೇ 1ರ 2019 ರಂದು ರಾತ್ರಿ ನಾಗತಿಬೆಳಗಲು ನಿವಾಸಿ ಗಣೇಶನಾಯ್ಕ ತಮ್ಮ ಕುಟುಂಬ ಸಮೇತರಾಗಿ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮದುವೆಗೆ ಹೋಗಿದ್ದರು. ಬಳಿಕ ಮೇ 3 ರಂದು ಮನೆಗೆ ಬಂದು ನೋಡಿದಾಗ  ಹಂಚು ತೆಗೆದು ಕಳ್ಳರು ನುಗ್ಗಿರುವುದು ಗೊತ್ತಾಗಿದೆ.  ಬೀರುವಿನಲ್ಲಿ 8 ಗ್ರಾಂ ಬಂಗಾರದ ಕಿವಿ ಓಲೆ, 8 ಸಾವಿರ ನಗದು ಹಣ ಕಳ್ಳತನವಾಗಿತ್ತು. ಈ ಹಿನ್ನೆಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ  (bhadravati rural poilice station)ದೂರು ನೀಡಿದ್ದರು.

ಕಾರು-ಒಮಿನಿ ಡಿಕ್ಕಿ! ತಲೆಕೆಳಗಾಗಿ ಬಿದ್ದ ವಾಹನ! ಘಟನೆ ತಡವಾಗಿ ಬೆಳಕಿಗೆ

2 ವರ್ಷ ಶಿಕ್ಷೆ!

ದೂರು ಸ್ವೀಕರಿಸಿ ತನಿಖೆ ಕೈಗೊಂಡ ಪೊಲೀಸರು ಮಹೇಶ್‌ನಾಯ್ಕ ಯಾನೆ ಮಹೇಶ ಎಂಬಾತನನ್ನ ಬಂದಿಸಿ ಕೇಸ್ ಮಾಡಿ, ಚಾರ್ಜ್ ಶೀಟ್ ಹಾಕಿದ್ದರು. ಇದೀಗ  ಆರೋಪ ಸಾಭೀತಾದ ಮೇರೆಗೆ ಭಾರತೀಯ ದಂಡ ಸಂಹಿತೆ ಕಲಂ 457 ರ ಅಪರಾಧಕ್ಕೆ 2 ವರ್ಷ ಶಿಕ್ಷೆ ಮತ್ತು 5 ಸಾವಿರ ದಂಡ, ದಂಡ ತುಂಬಲು ತಪ್ಪಿದಲ್ಲಿ ತಿಂಗಳ ಸಾದಾ ಸಜೆ, ಹಾಗೂ ಕಲಂ 380 ರ ಅಪರಾಧಕ್ಕೆ 2 ವರ್ಷ ಶಿಕ್ಷೆ ಮತ್ತು 5 ಸಾವಿರ ದಂಡ, ದಂಡ ತುಂಬಲು ತಪ್ಪಿದಲ್ಲಿ 2 ತಿಂಗಳು ಸಜೆ ಅನುಭವಿಸುವಂತೆ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ತಿಪ್ಪೇಶರಾವ್ ವಾದ ಮಂಡಿಸಿದ್ದರು.

Leave a Comment