ಕುಮಾರ್​ ಬಂಗಾರಪ್ಪರ ವಿರುದ್ಧ ಮತ್ತೆ ಸಿಡಿದ ನಮೋ ವೇದಿಕೆ! ಮಾರ್ಚ್​ 5 ಕ್ಕೆ ಅಭ್ಯರ್ಥಿ ಘೋಷಣೆ

ಹಂಚಿಕೊಳ್ಳಿ
WhatsApp Facebook X Telegram

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ನಮೋ ವೇದಿಕೆ ಹಾಗೂ ಶಾಸಕರ ನಡುವಿನ ಕಂದಕ ಇನ್ನಷ್ಟು ದೊಡ್ಡದಾಗುತ್ತಿದೆ. ಕುಮಾರ ಬಂಗಾರಪ್ಪರಿಗೆ ಈ ಸಲ ಟಿಕೆಟ್ ತಪ್ಪಿಸುವುದೇ ನಮ್ಮ ಗುರಿಯಾಗಿದೆ ಎಂದು ನಮೋ ವೇದಿಕೆಯ ತಾಲೂಕು ಅಧ್ಯಕ್ಷ ಪಾಣಿ ರಾಜಪ್ಪ ನಿನ್ನೆ ಹೆಳಿದ್ದಾರೆ ಅಲ್ಲದೆ  ನಮೋ ವೇದಿಕೆಯಿಂದ ಇದೇ ಮಾರ್ಚ್ 5 ರಂದು ಆನವಟ್ಟಿಯಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಅಂದು ಸುಮಾರು 20 ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಉದ್ದೇಶ ಹೊಂದಿದ್ದೇವೆ, ಅಂದೇ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಘೋಷಿಸುತ್ತೇವೆ ಎಂದಿದ್ದಾರೆ. 

ಸಾರ್ವಜನಿಕರ ಗಮನಕ್ಕೆ : ನಾಳೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಈ ಭಾಗಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ !

ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ನೇತೃತ್ವದಲ್ಲಿ ಸೊರಬದಲ್ಲಿ  ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜನರು ಪೇಜ್ ಪ್ರಮುಖರಲ್ಲ. ನಿಜವಾದ 6 ಸಾವಿರ ಪೇಜ್ ಪ್ರಮುಖರು ನಮೋ ವೇದಿಕೆಯಲ್ಲಿದ್ದಾರೆ  ಎಂದು ಸ್ಪಷ್ಟಪಡಿಸಿದರ ವೇದಿಕೆ ಸದಸ್ಯರು, ಯಾವುದೇ ಕಾರಣಕ್ಕೂ ಕುಮಾರ ಬಂಗಾರಪ್ಪ ಅವರಿಗೆ ಸ್ಪರ್ದಿಸಲು ಟಿಕೆಟ್ ನೀಡಬಾರದು, ಅವರ ವಿರುದ್ಧದ ನಮೋ ವೇದಿಕೆ ನಿಲುವು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಚುನಾವಣೆಯಲ್ಲಿ ನಮೋ ವೇದಿಕೆಯಿಂದ ಸೂಕ್ತವಾದ ಅಭ್ಯರ್ಥಿಯನ್ನು ಗುರುತಿಸಿ ಟಿಕೆಟ್ ನೀಡಲಾಗುವುದು ಎಂದಿದ್ಧಾರೆ. 

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor