ಕೊಟ್ಟಿರುವ ಕೇಸ್ ವಾಪಸ್ ತೆಗೆದುಕೊಂಡಿಲ್ಲ ಎಂಬ ಸಿಟ್ಟಿಗೆ ಮನೆ ಎದುರು ಹೋಗಿ ಬೆದರಿಕೆ ಹಾಕಿ, ಕಾರ್ಗೆ ಬೆಂಕಿ ಹಚ್ಚಿದ ಘಟನೆ ಶಿವಮೊಗ್ಗ ನಗರದ ಜೈಲ್ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ವನಜಾಕ್ಷಮ್ಮ ಎಂಬವರಿಗೆ ಸೇರಿದ ಕಾರು ಇದಾಗಿದ್ದು, ದುಷ್ಕರ್ಮಿಗಳ ದಾಂಧಲೆಯಲ್ಲಿ ಕಾರು ಪೂರ್ತಿ ಸುಟ್ಟುಹೋಗಿದೆ.
ಇದನ್ನು ಸಹ ಓದಿ : 15 ವರ್ಷದಿಂದ ಕಾಡು ಬಿಟ್ಟು ಬರದ ರೌಡಿ ಗಣೇಶ ಮಧ್ಯಪ್ರದೇಶಕ್ಕೆ! 6 ಮಂದಿಯನ್ನು ಕೊಂದ ಸಕ್ರೆಬೈಲ್ ಬಿಡಾರದ ಈ ಆನೆ ಎಷ್ಟೊಂದು ಉಗ್ರ ಸ್ವರೂಪಿ ಗೊತ್ತಾ?
ಕಳೆದ ಸೆಪ್ಟಂಬರ್ನಲ್ಲಿ ಜೈಲ್ ರೋಡ್ನ ಮಾರುತಿ ಟೀಸ್ಟಾಲ್ ಬಳಿಯಲ್ಲಿ ನಾಲ್ವರು ಯುವಕರು ಬಂದು ಅಂಗಡಿಯಲ್ಲಿದ್ದ ವನಜಾಕ್ಷಮ್ಮರವರನ್ನ ಬೈದು ನಿಂದಿಸಿ ಹಲ್ಲೆಗೆ ಮುಂದಾಗಿದ್ದರಂತೆ. ಆ ಸಂಬಂಧ ಜಯನಗರ ಪೊಲೀಸ್ ಸ್ಟೇಷನ್ನಲ್ಲಿ (Jayanagar police station) ಕೇಸ್ ಕೂಡ ದಾಖಲಾಗಿತ್ತು.
ಇದನ್ನು ಸಹ ಓದಿ : ರೈತರೇ ಎಚ್ಚರ, ಜೇಡಿಮಣ್ಣು ಕೊಟ್ಟು ಗೊಬ್ಬರ ಅಂತಾರೆ …ಹುಷಾರ್..ಇಲ್ಲಿದೆ ನೋಡಿ ಸಾಕ್ಷಿ
ಈ ಕೇಸ್ನ್ನ ವಾಪಸ್ ತೆಗೆದುಕೊಳ್ಳಬೇಕು ಎಂದು ಆರೋಪಿಗಳು ಪದೇ ಪದೇ ಬೆದರಿಸುತ್ತಿದ್ದರಂತೆ. ಇದರ ನಡುವೆ ಶಿವಮೊಗ್ಗದ ಜೈಲ್ ರಸ್ತೆಯಲ್ಲಿರುವ ವನಜಾಕ್ಷಮರವರ ನಿವಾಸಕ್ಕೆ ನಿನ್ನೆ ರಾತ್ರಿ ತೆರಳಿದ ನಾಲ್ವರು, ಅವರನ್ನು ನಿಂದಿಸಿ ಮನೆಯಿಂದ ಹೊರಕ್ಕೆ ಬರುವಂತೆ ಬೆದರಿಕೆ ಹಾಕಿದ್ದಾರೆ. ಹೆದರಿಕೊಂಡು ಮನೆಯವರು ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ್ದಾರೆ.
ಈ ರೀತಿ ಹೆದರಿಸಿ ಬೆದರಿಸುವುದಾದರೇ ನಾವು ಬದುಕುವುದು ಹೇಗೆ? ನಮಗೆ ರಕ್ಷಣೆ ಸಿಗುತ್ತಿಲ್ಲ ಎಂದು ಮಹಿಳೆ ಅಲವತ್ತುಕೊಂಡಿದ್ದು, ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿದ್ಧಾರೆ.
ಇದನ್ನು ಸಹ ಓದಿ : ಶಿವಮೊಗ್ಗ ಪೊಲೀಸರಿಂದ ತತ್ತಕ್ಷಣದ ಕಾರ್ಯಾಚರಣೆ/ 20 ಚೆಕ್ಪೋಸ್ಟ್ನಲ್ಲಿ 46 ಕೇಸ್/ ಏನಿದು? ವಿವರ ನೋಡಿ
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link