ಪತಿ ಎದುರೇ ನಡೀತು ಪತ್ನಿಯ ಕಿಡ್ನ್ಯಾಪ್​/ ಇಟ್ಟುಕೊಂಡವನೇ ಮಾಡಿದ್ದ ಅಪಹರಣ/ ಸ್ಟೇಷನ್ ಮಟ್ಟಿಲೇರಿತು ಇಬ್ಬರು ಪುರುಷರ ಜೊತೆಗಿನ ಸಂಸಾರ ಕದನ

ಹಂಚಿಕೊಳ್ಳಿ
WhatsApp Facebook X Telegram

ಇದು ಅನೈತಿಕ ಸಂಬಂಧದ ಕೊಂಡಿಯಲ್ಲಿ ಸಿಲುಕಿಕೊಂಡ ಅಪರೂಪದ ಘಟನೆ. ಕಟ್ಟಿಕೊಂಡ ಗಂಡನ ಜೊತೆಗಿದ್ದ ಪತ್ನಿಯನ್ನು ಪರಪುರುಷನೊಬ್ಬ ಕಿಡ್ನಾಪ್ ಮಾಡಿದ್ದಾನೆಂದು ಪತಿರಾಯ ಭದ್ರಾವತಿ ತಾಲ್ಲೂಕಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಭೇದಿಸಿ ಹೊರಟ ಪೊಲೀಸರಿಗೆ ಇಬ್ಬರು ಪುರುಷರ ನಡುವಿನ ಪ್ರೇಮ ಸಂಸಾರದ ಕಥೆ ಹೊರಬಿದ್ದಿದೆ. 

 ಇದನ್ನುಸಹ ಓದಿ : ರಾಜ್ಯ ಸಚಿವ ಸಂಪುಟದಲ್ಲಿ ತೀರ್ಥಹಳ್ಳಿಗೆ 75 ಕೋಟಿಯ ಕಾಮಗಾರಿ ಸ್ಯಾಂಕ್ಷನ್​/ ಎರಡು ಸೇತುವೆ ನಿರ್ಮಾಣಕ್ಕೆ ಅಸ್ತು

ಲಕ್ಷ್ಮಿ (ಹೆಸರು ಬದಲಿಸಿದೆ) ಎಂಬಾಕೆ ಕಟ್ಟಿಕೊಂಡ ಗಂಡನ ಜೊತೆಗೂ ಸಂಸಾರ ಮಾಡಿದ್ದಾಳೆ. ಅನೈತಿಕವಾಗಿ ಪ್ರಿಯಕರನ ಜೊತೆಗೂ ಸಂಸಾರ ಮಾಡಿದ್ದಾಳೆ. ಲಕ್ಷ್ಮಿ ಇಬ್ಬರು ಗಂಡರ ಮುದ್ದಿನ ಹೆಂಡ್ತಿಯಾಗಿದ್ದವಳು. ರಾಮಪ್ಪ(ಹೆಸರು ಬದಲಿಸಿದೆ) ಎಂಬ ಪತಿರಾಯನೊಂದಿಗೆ ಮದುವೆಯಾಗಿ ಸಂತೋಷವಾಗಿದ್ದಳು. ಸಂಸಾರದಲ್ಲಿ ಎಲ್ಲವೂ ಚೆನ್ನಾಗಿರುವಾಗಲೇ ಸುನಾಮಿಯಂತೆ ಬಂದು ಅಪ್ಪಳಿಸಿದವನು ಪ್ರಿಯಕರ ಗುಣ ( ಹೆಸರು ಬದಲಿಸಿದೆ).

ಇದನ್ನು ಸಹ ಓದಿ : ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ

ಇವರಿಬ್ಬರ ಅನೈತಿಕ ಸಂಬಂಧ ಗಟ್ಟಿಯಾಗುತ್ತಿರುವಾಗಲೇ ಅಧಿಕೃತ ಸಂಸಾರದಲ್ಲಿ ಬಿರುಗಾಳಿ ಎದ್ದಿತು. ಗಂಡ ಮಕ್ಕಳನ್ನು ತೊರೆದು ಲಕ್ಷ್ಮಿ ಪ್ರಿಯಕರ ಗುಣನೊಂದಿಗೆ ಸಂಸಾರ ಮಾಡಲು ಆರಂಭಿಸಿದಳು.ಹತ್ತು ವರ್ಷಗಳ ಅನೈತಿಕ ಸಂಬಂಧದಲ್ಲಿಯೇ ಸಂಸಾರ ಮುನ್ನೆಡಿಸಿದಳು ಲಕ್ಷ್ಮಿ. ಲಕ್ಷ್ಮಿ ಮತ್ತು ಗುಣನ ನಡುವಿನ ಸಂಸಾರದಲ್ಲಿ ಅದೇನು ಬಿರುಕು ಮೂಡಿತೋ ಗೊತ್ತಿಲ್ಲ…ಒರಿಜಿನಲ್ ಗಂಡನ  ಬಳಿಗೆ ಪ್ರಿಯಕರನ್ನು ತೊರೆದು ಬಂದ ಲಕ್ಷ್ಮಿ, ಗಂಡನೊಂದಿಗೆ ಸಂಸಾರ ಮುಂದುವರೆಸಿದ್ದಾಳೆ. ಕಳೆದ ಐದು ತಿಂಗಳಿನಿಂದ ಗಂಡ ರಮೇಶಪ್ಪನ ಜೊತೆ ಸಂಸಾರ ಮಾಡಿಕೊಂಡಿದ್ದ ಲಕ್ಷ್ಮಿಯನ್ನು ಹೇಗಾದ್ರೂ ಮಾಡಿ ಮತ್ತೆ ಪಟಾಯಿಸಿಬೇಕೆಂದು ಸ್ಕೆಚ್ ಹಾಕಿದ ಪ್ರಿಯಕರ ಗುಣ ಅಂತಿಮವಾಗಿ ಕಿಡ್ನಾಪ್ ಮಾಡಲು ಮುಂದಾದ.

ಇದನ್ನು ಸಹ ಓದಿ : ದೇಶದ ಅತಿದೊಡ್ಡ ಸೆಕ್ಸ್ ರಾಕೆಟ್ ಬಯಲು/ 14 ಸಾವಿರಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ/

ಪತಿ ಎದುರೇ ಪ್ರೇಯಸಿಯನ್ನು ಕಿಡ್ನಾಪ್ ಮಾಡಿದ ಪ್ರಿಯಕರ

ಹತ್ತು ವರ್ಷ ಸಂಸಾರ ಮಾಡಿದ ಪ್ರಿಯತಮೆ ತೊರೆದು ಹೋದಾಗ ಪ್ರಿಯಕರನಿಗೇ ಹೇಗಾಗಿರಬೇಡ. ಎಲ್ಲಾ ಕ್ರೈಂ ಸೀನ್ ಗಳಲ್ಲಿ ನಡೆದಂತೆ ಇಲ್ಲೂ ಕೂಡ ಒಂದು ಅಟೆಂಪ್ಟ್ ಗೆ ಗುಣ ಮುಂದಾದ. ಪತಿ ಮನೆಯಲ್ಲಿರುವಾಗಲೇ ತನ್ನ ಸಹಚರರ ಮೂಲಕ ಪ್ರಿಯತಮೆ ಲಕ್ಷ್ಮಿಯನ್ನು ಕಿಡ್ನಾಪ್ ಮಾಡಿದ. ನೋಡನೋಡುತ್ತಿದ್ದಂತೆ ನಡೆದ ಘಟನೆಯಿಂದ ಆಘಾತಕ್ಕೊಳಗಾದ ರಾಮಪ್ಪ, ಪತ್ನಿ ಕಿಡ್ನಾಪ್ ಮಾಡಿದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ.

ಇದನ್ನು ಸಹ ಓದಿ : ಕುಪ್ಪಳಿಯಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳಗಳು ಯಾವುವು ಗೊತ್ತಾ?

ಇತ್ತ ಪ್ರಿಯತಮೆ ಪೊಲೀಸರಿಗೆ ದೂರು ದಾಖಲಿಸದಂತೆ ಮನವಿ ಮಾಡಿದ್ದಳು. ಅಂತಿಮವಾಗಿ ಪೊಲೀಸರು ಗಂಡ ಕೊಟ್ಟ ದೂರಿನಂತೆ ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡು ಪ್ರಿಯಕರ ಗುಣನನ್ನು ಬಂಧಿಸಿದ್ದಾರೆ. ಕಟ್ಟಿಕೊಂಡ ಗಂಡ, ಪತ್ನಿಯ ಎಲ್ಲಾ ತಪ್ಪು ಮನ್ನಿಸಿ, ಹೊಸ ಸಂಸಾರಕ್ಕೆ ನಾಂದಿ ಹಾಡಿದ್ದ,ಈ ಸಂದರ್ಭದಲ್ಲಿಯೇ, ಸಂಸಾರದಲ್ಲಿ ಮತ್ತೆ ಹುಳಿ ಹಿಂಡಲು ಬಂದಿದ್ದ ಪ್ರಿಯಕರನ ವರ್ತನೆ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದೆ.

ಇದನ್ನು ಸಹ ಓದಿ : ದತ್ತಾತ್ರೇಯ ಜಯಂತಿಗೆ ಚಾಲನೆ, ದತ್ತಪೀಠ ಮಾರ್ಗದ ಮುಳ್ಳಯ್ಯನಗಿರಿ ತಿರುವು, ಕೆಮ್ಮಣ್ಣುಗುಂಡಿ ತಿರುವುಗಳಲ್ಲಿ ಮೊಳೆಗಳ ರಾಶಿ ಪತ್ತೆ

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor