ತೀರ್ಥಹಳ್ಳಿ : ಇಬ್ಬರನ್ನು ಕಿಡ್ನಾಪ್​ ಮಾಡಿ ಹಲ್ಲೆ: ಬಿಡ್ಬೇಕು ಅಂದ್ರೆ 5 ಲಕ್ಷ ಕೊಡಿ ಎಂದು ಬೆದರಿಕೆ, ಏನಿದು ಘಟನೆ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಶಿವಮೊಗ್ಗ ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಸುದ್ದಿಯ ಸ್ಥಳ: Thirthahalli, Shivamogga, Karnataka

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ: ಇಂಟೀರಿಯರ್ ಡೆಕೋರೇಷನ್ ಕೆಲಸ ಮಾಡಿಕೊಂಡಿದ್ದ ಇಬ್ಬರು ಯುವಕರನ್ನು ಅಪಹರಿಸಿ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ತೀರ್ಥಹಳ್ಳಿಯ ಪ್ರದೇಶವೊಂದರಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ 

ರುದಾರ ವ್ಯಕ್ತಿ ತೀರ್ಥಹಳ್ಳಿಯಲ್ಲಿ ಇಂಟೀರಿಯರ್ ಡೆಕೋರೇಷನ್ ಕೆಲಸವನ್ನು ಮಾಡುತ್ತಿದ್ದು, ಅವರ ಬಳಿ ಇಬ್ಬರು ಯುವಕರು ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ದೂರುದಾರರ ಗೋದಾಮಿಗೆ ಮೂವರು ಆರೋಪಿಗಳು ಅಕ್ರಮವಾಗಿ ನುಗ್ಗಿದ್ದಾರೆ. ನುಗ್ಗಿದ್ದಷ್ಟೇ ಅಲ್ಲದೆ, ಅಲ್ಲಿಯೇ ಕೆಲಸ ಮಾಡುತ್ತಿದ್ದ ಇಬ್ಬರು ಸಹಾಯಕರ ಮೇಲೆ ಹಲ್ಲೆ ನಡೆಸಿ, ನಿನ್ನ ಓನರ್ ಎಲ್ಲಿದ್ದಾನೆ? ಆತನ ಬಗ್ಗೆ ಮಾಹಿತಿ ನೀಡು, ಆತನನ್ನು ಜೀವಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ. ಹಾಗೆಯೇ ತಮ್ಮ ಕಾರಿನಲ್ಲಿ ಆ ಇಬ್ಬರೂ ಯುವಕರನ್ನು ಅಪಹರಿಸಿಕೊಂಡು ಹೋಗಿ ಬಾಳೆಬೈಲು ಸೇತುವೆಯ ಬಳಿ ನಿಲ್ಲಿಸಿದ್ದಾರೆ. “ನಿಮ್ಮ ಓನರ್ ಬರುವವರೆಗೂ ನಿಮ್ಮಿಬ್ಬರನ್ನು ಬಿಡುವುದಿಲ್ಲ; ನಿಮ್ಮನ್ನು ಬಿಡಬೇಕೆಂದರೆ ನಮಗೆ 5 ಲಕ್ಷ ರೂಪಾಯಿ ನೀಡಬೇಕು” ಎಂದು ಡಿಮ್ಯಾಂಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದಕ್ಕೆ ಆ ಇಬ್ಬರು ಯುವಕರು ಒಪ್ಪದಿದ್ದಾಗ, ಅವರನ್ನು ಶಿವಮೊಗ್ಗದ ಕಡೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಗಟ್ಟಿಯಾಗಿ ಕೂಗಿಕೊಂಡ ಹಿನ್ನೆಲೆಯಲ್ಲಿ ಆರೋಪಿಗಳು ಅವರನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಮಾರನೇ ದಿನ ಬೆಳಿಗ್ಗೆಯೂ ಸಹ ದೂರುದಾರರನ್ನು ಹುಡುಕಿಕೊಂಡು ಮೂವರು ಆರೋಪಿಗಳು ಅವರ ಮನೆಗೆ ಬಂದಿದ್ದರು. ಆರೋಪಿಗಳು ಬಂದ ವಿಷಯ ತಿಳಿದು ದೂರುದಾರರು ಮನೆಯಿಂದ ಪರಾರಿಯಾಗಿದ್ದಾರೆ. ನಂತರ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor