ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ ನವರಾತ್ರಿ ಉತ್ಸವ

ಹಂಚಿಕೊಳ್ಳಿ
WhatsApp Facebook X Telegram
Sigandur Jatre 2026 Sigandur Chowdeshwari Temple
Sigandur Jatre 2026 Sigandur Chowdeshwari Temple

ಮಲೆನಾಡು ಟುಡೆ ಸುದ್ದಿ / ತುಮರಿ / ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ. ನವರಾತ್ರಿ ಉತ್ಸವದಲ್ಲಿ ಏನೆಲ್ಲಾ ಕಾರ್ಯಕ್ರಮಗಳು ಇರಲಿವೆ ಎಂಬ ಮಾಹಿತಿ ಇಲ್ಲಿದೆ.

ಉತ್ಸವದ ಅಂಗವಾಗಿ ಪ್ರತಿದಿನ ಮುಂಜಾನೆ 4.30ರಿಂದ ತೈಲಾಭಿಷೇಕ, ಶೈಲಪುತ್ರಿ ಹಾಗೂ ಬ್ರಹ್ಮಚಾರಿಣಿ ಆರಾಧನೆ, ಗುರುಗಳ ಆರಾಧನೆ, ಗಣಹೋಮ, ಕುಂಕುಮಾರ್ಚನೆ, ಪಂಚಾಮೃತಾಭಿಷೇಕ, ಮಹಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿವೆ. ಇದೇ ಸಂದರ್ಭದಲ್ಲಿ ದುರ್ಗಾ ಹವನ ಹಾಗೂ ಚಂಡಿಕಾ ಹೋಮವೂ ನೆರವೇರಲಿವೆ.

ಪ್ರತಿದಿನ ಮಧ್ಯಾಹ್ನ 12.30ಕ್ಕೆ ನೈವೇದ್ಯ, ಸಂಜೆ 7ಕ್ಕೆ ದುರ್ಗಾ ಪೂಜೆ, 7.30ಕ್ಕೆ ದೀಪೋತ್ಸವ ನಡೆಯಲಿದೆ. ರಾತ್ರಿ 8ಕ್ಕೆ ಅಷ್ಟಾವಧಾನ ಸೇವೆ ಹಾಗೂ ಮಂಗಳಾರತಿ ನಡೆಯಲಿದೆ. ಧರ್ಮಾಧಿಕಾರಿ ಎಸ್. ರಾಮಪ್ಪ ನೇತೃತ್ವದಲ್ಲಿ ನವರಾತ್ರಿ ಕಾರ್ಯಕ್ರಮಗಳು ಜರುಗಲಿವೆ.

ರಂಗ ನವರಾತ್ರಿ

  • ‘ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ರ ರಂಗ ಶಿಕ್ಷಣದತ್ತ’ ಯೋಜನೆಯಡಿ ಈ ಬಾರಿಯ ನವರಾತ್ರಿಯಲ್ಲಿ 10 ಸರ್ಕಾರಿ ಶಾಲೆಗಳ ಒಟ್ಟು 210 ವಿದ್ಯಾರ್ಥಿಗಳಿಂದ ಪ್ರತಿದಿನ ರಾತ್ರಿ 7ರಿಂದ 8ರವರೆಗೆ ‘ರಂಗ ನವರಾತ್ರಿ’ ನಾಟಕ ಪ್ರದರ್ಶನ ನಡೆಯಲಿದೆ.
  • ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಮುಳುಗಡೆಯಾದ ನೆಲಕ್ಕೆ ಸಂಬಂಧಿಸಿದ 10 ಕಥೆಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಅವುಗಳಿಗೆ ‘ರಂಗರೂಪ’ ನೀಡಲಿದ್ದಾರೆ.
  • ನವರಾತ್ರಿ ಉತ್ಸವದ ಅವಧಿಯಲ್ಲಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರಿಗೆ ವಸತಿ, ದೇವಿಯ ದರ್ಶನ ಹಾಗೂ ನಿತ್ಯ ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ತಿಳಿಸಿದ್ದಾರೆ.
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor