ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದಲ್ಲಿ ಡ್ರೈವರ್ ಒಬ್ಬರ ವೈಯಕ್ತಿಕ ಮಾಹಿತಿ ಪಡೆದು ಸೈಬರ್ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ
ದೂರುದಾರರು ಹೀಗೆ ಕುಳಿತಿದ್ದಾಗ ಮೊಬೈಲ್ಗೆ ಮೆಸೇಜ್ ಒಂದು ಬಂದಿದೆ. ಏನಿದು ಎಂದು ತೆರೆದು ನೋಡಿದಾಗ ದೂರುದಾರರಿಗೆ ಶಾಕ್ ಎದುರಾಗಿದೆ. ಅದೇನೆಂದರೆ, ಮೊಬೈಲ್ನಲ್ಲಿ ಹಂತ-ಹಂತವಾಗಿ ಬರೋಬ್ಬರಿ 4,04,125 ರೂಪಾಯಿ ಹಣ ವಿತ್ಡ್ರಾ ಆಗಿರುವ ಮೆಸೇಜ್ ಬಂದಿದೆ.
ಈ ಬಗ್ಗೆ ಬ್ಯಾಂಕ್ನಲ್ಲಿ ವಿಚಾರಿಸಿದಾಗ, ಯಾರೋ ಅಪರಿಚಿತ ವ್ಯಕ್ತಿಗಳು ದೂರುದಾರರ ವೈಯಕ್ತಿಕ ಮಾಹಿತಿ ಪಡೆದು, ದೂರುದಾರರಂತೆ ನಟಿಸಿ ಬ್ಯಾಂಕ್ ಖಾತೆಯಿಂದ ಒಟ್ಟು 4,04,125/- ರೂ. ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ವಂಚಕರನ್ನು ಪತ್ತೆಹಚ್ಚಿ ಹಣವನ್ನು ಹಿಂತಿರುಗಿಸಿಕೊಡಬೇಕೆಂದು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
