ಶಿವಮೊಗ್ಗ : ಶಿವಮೊಗ್ಗದ ಎಸ್​,ಎಂ,ಎಸ್,​ಎಸ್​ ಚೈತನ್ಯ ಸಂಸ್ಥೆಯ ವತಿಯಿಂದ ನಿರಾಶ್ರಿತರಿಗೆ ಅನ್ನದಾನ

ಹಂಚಿಕೊಳ್ಳಿ
WhatsApp Facebook X Telegram
ಎಸ್_,ಎಂ,ಎಸ್,_ಎಸ್_ ಚೈತನ್ಯ ಸಂಸ್ಥೆಯ ವತಿಯಿಂದ ನಿರಾಶ್ರಿತರಿಗೆ ಅನ್ನದಾನ
ಎಸ್_,ಎಂ,ಎಸ್,_ಎಸ್_ ಚೈತನ್ಯ ಸಂಸ್ಥೆಯ ವತಿಯಿಂದ ನಿರಾಶ್ರಿತರಿಗೆ ಅನ್ನದಾನ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ :  ಶಿವಮೊಗ್ಗದ  ಎಸ್​,ಎಂ,ಎಸ್,​ಎಸ್​ ​ ಚೈತನ್ಯ ಸಂಸ್ಥೆಯ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತವಾಗಿ ಇಂದು ಶ್ರೀ ರಾಮ್​​ ಪುರದಲ್ಲಿರುವ ಹಕ್ಕಿಪಿಕ್ಕಿ ಕ್ಯಾಂಪ್​ನಲ್ಲಿ ನಿರಾಶ್ರಿತರಿಗೆ ಅನ್ನದಾನವನ್ನು ಮಾಡಲಾಯಿತು.

ಶಿವಮೊಗ್ಗದ ಎಸ್​,ಎಂ,ಎಸ್,​ಎಸ್​  ಚೈತನ್ಯ ಸಂಸ್ಥೆ ಕಳೆದ ಎರಡು ವರ್ಷದಿಂದ ಗಾಂಧಿ ಜಯಂತಿ ಪ್ರಯುಕ್ತ ಅನ್ನದಾನ ಸೇವೆಯನ್ನು ಮಾಡುತ್ತಾ ಬರುತ್ತಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಮೆಗ್ಗಾನ್​ ಆಸ್ಪತ್ರೆಯಲ್ಲಿ ಅನ್ನದಾನವನ್ನು ಹಮ್ಮಿಕೊಂಡಿದ್ದ ಸಂಸ್ಥೆ, ಈ ಬಾರಿಯೂ ಶ್ರೀರಾಮ್​ ಪುರದಲ್ಲಿರುವ ಹಕ್ಕಿಪಿಕ್ಕಿ ಕ್ಯಾಂಪ್​​ನಲ್ಲಿ ಅನ್ನದಾನವನ್ನು ಹಮ್ಮಿಕೊಂಡಿತ್ತು. ಇದಕ್ಕೂ ಮೊದಲು ಸಂಸ್ಥೆಯ ಪಧಾದಿಕಾರಿಗಳು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸುವ ಮೂಲಕ ಶ್ರಮಧಾನವನ್ನು ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಜಾನೆಟ್​​​​​ ಮಾತನಾಡಿ ನಮ್ಮ ಸಮಾಜದಲ್ಲಿ ಸಾಕಷ್ಟು ಜನ ಹಸಿದವರಿದ್ದಾರೆ. ಅವರ ಹಸಿವು ನೀಗಿಸುವ ದೃಷ್ಟಿಯಿಂದ ನಾವು ಅನ್ನದಾನವನ್ನು ಮಾಡುತ್ತಾ ಬರುತ್ತಿದ್ದೇವೆ, ನಮ್ಮಲ್ಲಿ ಅನೇಕ ಸಮಾರಂಭಗಳನ್ನು ಮಾಡುತ್ತೇವೆ, ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನ್ನ ಉಳಿಯುತ್ತದೆ, ಆ ಅನ್ನವನ್ನು ಯಾರೂ ಸಹ ಪೋಲು ಮಾಡದೆ ದಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಶ್ರೀ ಬಂಧು ಸೌರ್ಹಾರ್ಧ ಸಹಕಾರಿ ಅಧ್ಯಕ್ಷರು ಪ್ರಸಿಲ್ಲಾ ಮಾರ್ಟಿಸ್​, ಸಂಯೋಜಕ ಜಗದೀಶ್​​​​, ಪ್ರಮೀಳ, ಕಾರ್ಯಕರ್ತರು ಜ್ಯೋತಿವಾಜ್​​​​​, ಮಾಲೀನಿ ಸೇರಿದಂತೆ  ಒಕ್ಕೂಟದ ಪ್ರಮುಖ ಪಧಾದಿಕಾರಿಗಳು ಭಾಗಿಯಾಗಿದ್ದರು.   

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor