ಮಲೆನಾಡು ಟುಡೆ ಸುದ್ದಿ / ಇಲ್ಲಿ ವಧು ಇಲ್ಲ, ವರನೂ ಇಲ್ಲ. ನಿಜವಾದ ಮದುವೆಯಂತೂ ನಡೆಯುವುದೇ ಇಲ್ಲ. ಆದರೂ ಮದುವೆಯ ಮೆರವಣಿಗೆ ನಡೆಯುತ್ತದೆ, ಸಂಗೀತ ಕಚೇರಿ ನಡೆಯುತ್ತೆ, ಅರಶಿನ, ಚಪ್ಪರದಿಂದ ಹಿಡಿದು ಪ್ರತಿಯೊಂದು ನಡೆಯುತ್ತದೆ. ಆಡಂಬರದ ಡ್ರೆಸ್ಗಳನ್ನ ಹಾಕಿಕೊಂಡು ಅತಿಥಿಗಳು ಸಹ ಬರುತ್ತಾರೆ. ಮುಹೂರ್ತ ಮೀರದಂತೆ ಮದುವೆ ಶಾಸ್ತ್ರಗಳು ನಡೆಯುತ್ತದೆ. ವಧು-ವರರ ಪಾತ್ರದಾರಿಗಳು ಪರಸ್ಪರ ಮಾಲೆ ಬದಲಾಯಿಸಿ ಮದುವೆಯು ಆಗುತ್ತಾರೆ. ಇಷ್ಟೆಲ್ಲದರ ನಡುವೆಯು ಇದೊಂದು ಫೇಕ್ ವೆಡ್ಡಿಂಗ್ ..
ಹೌದು, ಇಂಡಿಯಾದಲ್ಲಿ ಏನಲ್ಲಾ ನಡೆಯುತ್ತೆ ಎನ್ನುವುದುಕ್ಕೆ ಇದು ಸಹ ಒಂದು ಉದಾಹರಣೆಯಷ್ಟೆ. ಈ ರೀತಿಯ ಫೇಕ್ ವೆಡ್ಡಿಂಗ್ 2023ರಿಂದ ಕಾಣಿಸಿಕೊಳ್ಳಲು ಆರಂಭವಾಗಿದೆ. ಇಂತಹದ್ದೆ ಕಡೆಯಲ್ಲಿ ಆರಂಭವಾಯ್ತು ಎನ್ನುವುದಕ್ಕೆ ಆಧಾರವಿಲ್ಲವಾದರೂ ಹೈದ್ರಾಬಾದ್ನಲ್ಲಿ ಆರಂಭವಾಯ್ತು ಅನ್ನುತ್ತಾರೆ ಕೆಲವರು. ಸದ್ಯ ಈ ಫೇಕ್ ವೆಡ್ಡಿಂಗ್ ಪಾರ್ಟಿಗಳು ಈಗ ಯುವಜನರನ್ನೆ ಸೆಳೆಯುತ್ತಿದೆ. ತಮಗೆ ಎಂಜಾಯ್ ಹಾಗು ಎಂಟಟೇನ್ ಮೆಂಟ್ ಬೇಕು ಎನ್ನುವವರಿಗಾಗಿ ಇಂತಹ ಫೇಕ್ ವೆಡ್ಡಿಂಗ್ ಸರ್ಮನಿಗಳನ್ನ ಆಯೋಜಿಸಲಾಗುತ್ತಿದೆ.
ಸಾಮಾನ್ಯ ಮದುವೆಯಲ್ಲಿ ಕುಟುಂಬವೊಂದು ಕೈಗೊಳ್ಳುವ ಪದ್ದತಿಯಿಂದ ಹಿಡಿದು ಕುಣಿದು ಕುಪ್ಪಳಿಸುವ ಸಡಗರದವರೆಗೂ ಎಲ್ಲವೂ ಇಲ್ಲಿ ನಡೆಯುತ್ತದೆ. ಇದಕ್ಕೆ ಟಿಕೆಟ್ ಪಡೆದು ಯಾರು ಬೇಕಾದರೂ ಬಾಹವಹಿಸುವಬಹುದು. ಈ ಕಾರ್ಯಕ್ರಮಗಳ ಉದ್ದೇಶ ಮದುವೆ ಮನೆಯ ವಾತಾವರಣವನ್ನು ಸೃಷ್ಟಿಸಿ ಬಂದವರಿಗೆ ಮನರಂಜನೆ ನೀಡುವುದು ಎನ್ನುತ್ತಾರೆ ತಜ್ಞ ಜರ್ನಲಿಸ್ಟ್ ಒಬ್ಬರು
ಮದುವೆ ಮನೆಯ ಸಂಭ್ರಮಕ್ಕೆ ಬರುವ ಅತಿಥಿಗಳಿಗಾಗಿ ವಿಶೇಷ ಕೌಂಟರ್ಗಳನ್ನ ಇಟ್ಟು, ಅವರಿಗೆ ಮೆಹಂದಿ ಹಾಕುವುದರಿಂದ ಹಿಡಿದು, ಫೋಟೋ ಶೂಟ್ವರೆಗೂ ಪ್ರತಿಯೊಂದು ಸೌಲಭ್ಯ ನೀಡಲಾಗುತ್ತದೆ. ಅಲ್ಲದೆ ಮನರಂಜನೆಯ ಮೇನ್ ತೀಮ್ ಆಗಿ ವಿವಿಧ ರೀತಿಯ ಆರ್ಕೆಸ್ಟ್ರಾಗಳಿರುತ್ತದೆ. ಬಂದವರು ತಮ್ಮದೆ ಹತ್ತಿರದ ಸಂಬಂಧಿ ಎಂದು ಕುಣಿದು ಕುಪ್ಪಳಿಸಬಹುದು. ವಿಶೇಷ ಅಂದರೆ, ಫೇಕ್ ವೆಡ್ಡಿಂಗ್ನಲ್ಲಿಯು ವಧುವಿನ ಕಡೆಯವರು ಮತ್ತು ವರನ ಕಡೆಯವರು ಎಂದು ಡಿವೈಢ್ ಆಗಬಹುದು. ಫೇಕ್ ವೆಡ್ಡಿಂಗ್ಗೆ ಬಂದವರಲ್ಲೇ ಯಾರಾದರೂ ಸಹ ಫೇಕ್ ವರ, ವಧು ಸಹ ಆಗಬಹುದು.
ಎಲ್ಲಾ ಪದ್ದತಿಗಳು ನಡೆದರೂ ಮದುವೆಯ ಶಾಸ್ತ್ರಗಳು ಮಾತ್ರ ಇಲ್ಲಿ ನಡೆಯಲ್ಲ, ಫೇಕ್ ವೆಡ್ಡಿಂಗ್ ಅಲ್ವಾ ಹಾಗಾಗಿ. ಇನ್ನೂ ಊಟ , ತಿಂಡಿ, ಪಾನ ಗೋಷ್ಟಿಗಳು ಸಹ ಜೋರಾಗಿ ನಡೆಯುತ್ತವೆ. ಮದುವೆ ಹಾಗೂ ರಿಸ್ಪೆಪ್ಶನ್ ಅನ್ನುವ ಸೆಟ್, ಇಲ್ಲಿ ಕೇವಲ ಅದ್ದೂರಿಯಾಗಿ ಮೈಮೆರತು ಎಂಜಾಯ್ ಮಾಡುವ ವೇದಿಕೆ! ಏಕೆ ಹೀಗೆ ಅಂದರೆ, ಅದಕ್ಕೆ ಅದರದ್ದೆ ಆದ ರೀಸನ್ಗಳು ಸಿಗುತ್ತದೆ. ಎಲ್ಲಿಗೆ ಹೋಗಿದ್ದೆ ಎನ್ನುವುದಕ್ಕೆ ಉತ್ತರದಿಂದ ಹಿಡಿದು, ಫೋಟೋ ಸಾಕ್ಷಿ ತೋರಿಸಿ ಹೋಗಿದ್ದು ಮದುವೆ ಎಂದು ಮನೆಯಲ್ಲಿ ನಂಬಿಸುವುದಕ್ಕೂ ಈಥರದ ಇವೆಂಟ್ಗಳು ರೀಸನ್ ಆಗುತ್ತಿದೆ.
ಸದ್ಯ ಆಂಧ್ರದಲ್ಲಿ ಇದೊಂಥರ ಜೋರು ಬ್ಯುಸಿನೆಸ್ ಆಗಿದೆ ಎಂಬುದು ಸದ್ಯದ ವರ್ತಮಾನ! ಒಬ್ಬರಿಗೆ ಕನಿಷ್ಟ 10 ಸಾವಿರವರೆಗೂ ಟಿಕೆಟ್ ಬುಕ್ ಮಾಡಿ , ಇಂತಹ ಇವೆಂಟ್ಗಳನ್ನ ಆಯೋಜಿಸುವವರು, ಇವೆಂಟ್ ಒಂದಕ್ಕೆ ನಾಲ್ಕೈದು ಲಕ್ಷ ಖರ್ಚು ಮಾಡಿ 20-25 ಲಕ್ಷ ದುಡ್ಡಿಯುತ್ತಿದ್ದಾರೆ ಅಂತಾ ಅಂದಾಜಿಸಲಾಗುತ್ತಿದೆ. ಒಟ್ಟಾರೆ, ವಿಷಯ ಹೀಗಿದೆ…ಈ ಹೊತ್ತಿನಲ್ಲಿ ದುಡ್ಡು ಮಾಡುವ ದಾರಿಗಳು ಬದಲಾಗುತ್ತಲೇ ಇರುತ್ತವೆ ಎನ್ನುವುದಕ್ಕೆ ಈ ಪೇಕ್ ವೆಡ್ಡಿಂಗ್ ಕಾನ್ಸೆಪ್ಟ್ ಸಾಕ್ಷಿ ಎನ್ನಕ್ಕಾಗಲ್ಲವಾದರೂ, ಇದು ಸಹ ಮುಂದಿನ ಹಣದ ಹಾದಿ ಎನ್ನಬಹುದು
