Shivamogga ಶಿವಮೊಗ್ಗ: ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರನಹಳ್ಳಿ ಗ್ರಾಮದ ಸಾದಿಕ್ ಪಾಷ ಎಂಬುವವರ ಮಗ ಮೊಹಮ್ಮದ್ ಸಾಕಿಬ್ ಎಂಬ 16 ವರ್ಷದ ಬಾಲಕ ಆ. 06 ರಿಂದ ನಾಪತ್ತೆ ಆಗಿದ್ದಾನೆ.
ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ ನಿರ್ಮಾಣ: ಜಮೀನು ಪರಿಶೀಲನೆ
ಈತನ ಚಹರೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಮನೆಯಿಂದ ಹೋಗುವಾಗ ಶಾಲಾ ಸಮವಸ್ತ್ರವಾದ ನೀಲಿ ಬಣ್ಣದ ಪ್ಯಾಂಟ್ ಮತ್ತು ಆಕಾಶ ನೀಲ ಬಣ್ಣದ ಶರ್ಟ್ ಧರಿಸಿರುತ್ತಾರೆ.
ಈ ಬಾಲಕನ ಕುರಿತು ಸುಳಿವು ಇದ್ದಲ್ಲಿ ಕುಂಸಿ ಪೊಲೀಸ್ ಠಾಣೆ ದೂ.ಸಂ.; 9480803351, ಡಿವೈಎಸ್ಪಿ ಕಚೇರಿ; 08182-261402 ಮತ್ತು ಎಸ್ಪಿ ಕಚೇರಿ; 08182-261400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
