in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದಲ್ಲಿ ಕಾರಿಗೆ ಬೈಕ್ ಡಿಕ್ಕಿ ಹೊಡೆದದ್ದನ್ನು ಪ್ರಶ್ನಿಸಿದ ಉದ್ಯಮಿಯೊಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಬ್ಬಿಣದ ಪಂಚ್‌ನಿಂದ ಹಲ್ಲೆ ನಡೆಸಿ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ FIR ಆಗಿದೆ
ಘಟನೆ ವಿವರ ನೋಡುವುದಾದರೆ, ಆಗಸ್ಟ್ 10 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಉದ್ಯಮಿಯೊಬ್ಬರು ತಮ್ಮ ಕಾರಿನಲ್ಲಿ ಕುವೆಂಪು ರಸ್ತೆಯಲ್ಲಿ ಬರುತ್ತಿದ್ದಾಗ, ಪೆಟ್ರೋಲ್ ಬಂಕ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ಬಂದ ಇಬ್ಬರು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಬಳಿಕ ಕಾರನ್ನು ಬದಿಗೆ ನಿಲ್ಲಿಸುವಂತೆ ಹೇಳಿ, ಉದ್ಯಮಿಯ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಅಲ್ಲಿಗೆ ಟ್ರಾಫಿಕ್ ಪೊಲೀಸರು ಬಂದಿದ್ದು, ನಂಬರ್ ಪ್ಲೇಟ್ ಇಲ್ಲದಿರುವುದು ವಿಚಾರಿಸಿ ಬೈಕ್ ಕೀ ತಗೆದುಕೊಳ್ಳಲು ಮುಂದಾದಾಗ ಆರೋಪಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಬಳಿಕ ಅದೇ ದಿನ ಸಂಜೆ, ಪುನಃ ಉದ್ಯಮಿಯ ಕಾರನ್ನ ಅಡ್ಡಗಟ್ಟಿದ ಆರೋಪಿಗಳು ಪೊಲೀಸರು ನಮ್ಮ ಗಾಡಿ ಕೀ ತೆಗೆದುಕೊಂಡು ಹೋಗಿದ್ದಾರೆ, ಹೊಸ ಕೀ ಮಾಡಿಸಿಕೊಡು, ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕಬ್ಬಿಣದ ಪಂಚ್‌ನಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅವರ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಲು ಮುಂದಾಗಿದ್ದಾರೆ. ಬಳಿಕ ಕಾರಿನ ಕೀ ಕಸಿದುಕೊಂಡು, ಉದ್ಯಮಿ ಬಳಿಯಿದ್ದ 11000 ರೂಪಾಯಿ ದೋಚಿದ್ದಾರೆ. ಈ ವೇಳೆ ಜನ ಸೇರಿದ್ದರಿಂದ ಎಸ್ಕೇಪ್ ಆಗಿದ್ದಾರೆ. ಗಾಯಗೊಂಡಿದ್ದ ಉದ್ಯಮಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ನೀಡಿದ ಹೇಳಿಕೆ ಆಧರಿಸಿ ಕೇಸ್ ದಾಖಲಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಈ ಘಟನೆ ನಡೆದಿರುವುದು ನಿಜಕ್ಕೂ ಆತಂಕಕಾರಿ
