ದೈನಂದಿನ ರಾಶಿಭವಿಷ್ಯ ಮತ್ತು ಪಂಚಾಂಗ : ಇಂದಿನ ಫಲಾಫಲ & ಶುಭಸಮಯ ತಿಳಿಯಿರಿ

ಹಂಚಿಕೊಳ್ಳಿ
WhatsApp Facebook X Telegram
Daily horoscope
Daily horoscope

Astrology Predictions / ಮಲೆನಾಡು ಟುಡೆ ಸುದ್ದಿ / ದೃಕ್​ ಪಂಚಾಂಗದ ಪ್ರಕಾರ, ಇವತ್ತಿನ ರಾಶಿಫಲಗಳನ್ನು ಗಮನಿಸುವುದಾದರೆ, ಮೇಷ ರಾಶಿಯವರಿಗೆ ಮಾನಸಿಕ ವಿಷಯಗಳಲ್ಲಿ ಹೆಚ್ಚು ಸಿಗಲಿದೆ. ಇವತ್ತು ಧನಲಾಭ ಸಿಗುವ ದಿನವಾಗಿದೆ. ವೃಷಭ ರಾಶಿಯವರ ಆಸಕ್ತಿ ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಾಗಿರಲಿದೆ. ಮಿಥುನ ರಾಶಿಯವರಿಗೆ ಯಶಸ್ಸಿನ ದಿನ. ಸಾಧನೆ ಉತ್ತಮವಾಗಿರುವ ಲಕ್ಷಣಗಳಿವೆ. ಕರ್ಕಾಟಕ ರಾಶಿಯವರಿಗೆ ಮನೆ-ಕುಟುಂಬದ ಸದಸ್ಯರೊಂದಿಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಮಯ ಇದಾಗಿದೆ.

ಸಿಂಹ ರಾಶಿಯವರಿಗೆ ಯಶಸ್ಸು ಸಿಗುವ ಮುನ್ಸೂಚನೆಗಳಿವೆ. ಕನ್ಯಾ ರಾಶಿಯವರು ಖರ್ಚಿನ ಮೇಲೆ ನಿಯಂತ್ರಣವಿಟ್ಟುಕೊಳ್ಳುವುದು ಒಳ್ಲೆಯದು ತುಲಾ ರಾಶಿಯವರಿಗೆ ವೃತ್ತಿಜೀವನದಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶಗಳಿರುತ್ತವೆ. ವೃಶ್ಚಿಕ ರಾಶಿಯವರು ತಮ್ಮ ವಿವಿಧ ಕಾರ್ಯಗಳನ್ನು ಪೂರ್ವಯೋಜನೆಗೆ ಅನುಗುಣವಾಗಿ ಪೂರ್ಣಗೊಳಿಸುವರು.

ಧನು ರಾಶಿಯವರಿಗೆ ಅದೃಷ್ಟದ ಬೆಂಬಲ ದೊರೆಯುವುದರಿಂದ ಯಶಸ್ಸು ಉನ್ನತ ಮಟ್ಟದಲ್ಲಿರಬಹುದು. ಮಕರ ರಾಶಿಯವರು ವಿರೋಧಿಗಳೊಂದಿಗಿನ ವ್ಯವಹಾರದಲ್ಲಿ ನಿರ್ಲಕ್ಷ್ಯ ವಹಿಸುವುದನ್ನು ತಪ್ಪಿಸಬೇಕು. ಕುಂಭ ರಾಶಿಯವರು ತಮ್ಮದೆ ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದ್ದಾರೆ ಹಾಗೂ ಕೈಗಾರಿಕಾ ವಿಷಯಗಳಿಗೆ ಹೆಚ್ಚಿನ ಬಲ ಸಿಗಲಿದೆ. ಮೀನ ರಾಶಿಯವರು ವಿವೇಚನೆಯಿಂದ ಮುನ್ನಡೆಯುವ ಸಮಯ ಇದಾಗಿದೆ.

ಇಂದಿನ ಪಂಚಾಂಗದ ವಿವರಗಳನ್ನು ಗಮನಿಸುವುದಾದರೆ, ಶ್ರಾವಣ ಮಾಸದ ಶುಕ್ಲ ಪಕ್ಷ ನಡೆಯುತ್ತಿದ್ದು, ರಾತ್ರಿ 08:41 ರವರೆಗೆ ಪಾಡ್ಯ ತಿಥಿ ಇರಲಿದ್ದು, ತದನಂತರ ಬಿದಿಗೆ ಆರಂಭವಾಗಲಿದೆ. ಬೆಳಿಗ್ಗೆ 06:06 ರವರೆಗೆ ಮಖಾ ನಕ್ಷತ್ರವಿದ್ದು, ಆ ಬಳಿಕ ಪೂರ್ವ ಫಲ್ಗುಣಿ ನಕ್ಷತ್ರ ಮೂಡಲಿದೆ. ರಾಹುಕಾಲ ಮಧ್ಯಾಹ್ನ 02:03 ರಿಂದ 03:42 ರವರೆಗೆ, ಯಮಗಂಡ ಕಾಲ ಬೆಳಿಗ್ಗೆ 05:53 ರಿಂದ 07:31 ರವರೆಗೆ ಹಾಗೂ ಗುಳಿಕ ಕಾಲ ಬೆಳಿಗ್ಗೆ 08:09 ರಿಂದ 10:47 ರವರೆಗೆ ಇರಲಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor