Ganja Seized in Narasimharajapura /ಮಲೆನಾಡು ಟುಡೆ ಸುದ್ದಿ / ಶಿನರಸಿಂಹರಾಜಪುರ / ಖಚಿತ ಮಾಹಿತಿ ಅನ್ವಯ ಇಲ್ಲಿನ ಪೊಲೀಸರು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕೆ. ಕಣಬೂರು ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಅಂದಾಜು 50 ಸಾವಿರ ಮೌಲ್ಯದ ಗಾಂಜಾ, 2 ಬೈಕ್ ಹಾಗೂ 3 ಜನ ಆರೋಪಿಗಳನ್ನು ಮೊನ್ನೆ ದಿನ ಶನಿವಾರ ಸಂಜೆ ಬಂಧಿಸಿದ್ದಾರೆ.
ಶನಿವಾರ ಸಂಜೆ 4.30ಕ್ಕೆ ಮುತ್ತಿನಕೊಪ್ಪ ಗ್ರಾಪಂನ ಕೆ.ಕಣಬೂರು ಬಸ್ ನಿಲ್ದಾಣದಲ್ಲಿ ನಿಂತಿದ್ದ ಆರೋಪಿಗಳನ್ನು ತಪಾಸಣೆ ಮಾಡಿದಾಗ ಅವರ ಬ್ಯಾಗ್ ನಲ್ಲಿ ಗಾಂಜಾ ಹೂ, ಮೊಗ್ಗು, ಸೊಪ್ಪು ಪತ್ತೆಯಾಗಿದೆ. ಇವರನ್ನ ವಿಚಾರಿಸಿದಾಗ, ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಅಪರಿಚಿತರು ಕಡಿಮೆ ದರದಲ್ಲಿ ಗಾಂಜಾ ನೀಡಿದ್ದು ಅದನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.
ಎರಡು ಬೈಕ್ಗಳಲ್ಲಿ ಬಂದಿದ್ದ ಆರೋಪಿಗಳು ಮಳೆ ಕಾರಣಕ್ಕೆ ಬಸ್ಸು ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಪೊಲೀಸರಿಗೆ ಮಾಹಿತಿ ಸಿಕ್ಕಿ ರೇಡ್ ಮಾಡಿದ್ದಾರೆ. ಇನ್ನೂ ಪೊಲೀಸರು ಆರೋಪಿಗಳಿಂದ ಗಾಂಜಾ, 2 ಬೈಕ್ ವಶಪಡಿಸಿಕೊಂಡು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಎನ್.ಆರ್.ಪುರ ಪೊಲೀಸ್ ಠಾಣಾಧಿಕಾರಿ ನೂತನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್.ಐ ನಾಗರಾಜ್, ಸಿಬ್ಬಂದಿ ಮಧು, ಕೌಸಿಕ್, ಚಂದ್ರು, ಪರಮೇಶ್, ಕಾಂತೇಜ್ ಪಾಲ್ಗೊಂಡಿದ್ದರು.
ಮೂಲ : ಚಿಕ್ಕಮಗಳೂರು ಪೊಲೀಸ್
