Cyber Scam ರಿಪ್ಪನ್ಪೇಟೆ: ಗ್ರಾಮ ಪಂಚಾಯಿತಿ ಹೆಸರಿನಲ್ಲಿ ಪಟ್ಟಣದ ವರ್ತಕರಿಗೆ ಕರೆ ಮಾಡಿ ಸೈಬರ್ ವಂಚನೆಗೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಶಿವಮೊಗ್ಗ : ಮಧು ಬಂಗಾರಪ್ಪರಿಗೆ ಮತ್ತೊಮ್ಮೆ ಸಚಿವ ಸ್ಥಾನ: ನೂತನ ಸಚಿವರ ಪೈನಲ್ ಲೀಸ್ಟ್ ಇಲ್ಲಿದೆ ನೋಡಿ
ಕಳೆದೆರಡು ದಿನಗಳಿಂದ ಫೋನ್ನಲ್ಲಿ ವಕೀಲನೆಂದು ಪರಿಚಯಿಸಿಕೊಳ್ಳುವ ವ್ಯಕ್ತಿ ಕೆಲವು ವರ್ತಕರಿಗೆ ಕರೆಮಾಡಿ, ನಿಮ್ಮ ಇ- ಖಾತಾ ವ್ಯತ್ಯಾಸವಿದೆ. ವ್ಯವಹಾರಿಕ ಪರವಾನಗಿಯಲ್ಲಿ ಲೋಪವಿದೆ. ನವೀಕರಿಸಬೇಕಾದಲ್ಲಿ 1950 ರೂ. ಗಳನ್ನು ಆನ್ಲೈನ್ನಲ್ಲಿ ಪಾವತಿಸಿ. ಇಲ್ಲದಿದ್ದಲ್ಲಿ ನಿಮ್ಮ ಅಂಗಡಿ ಲೈಸೆನ್ಸ್ ರದ್ದುಪಡಿಸಿ ನ್ಯಾಯಾಲಯಕ್ಕೆ ದಾವೆ ಹಾಕಲಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾನೆ.
ಸಂಬಂಧಪಟ್ಟ ದಾಖಲೆಗಳಿಗೆ ವಾಟ್ಸ್ ಆಪ್ ಲಿಂಕ್ ಒತ್ತಿ ನೋಡಿ ಎಂದು ತಿಳಿಸಿದ್ದಾನೆ. ಅನುಮಾನ ಗೊಂಡ ಕೆಲವರು ಗ್ರಾ.ಪಂ. ಸಿಬ್ಬಂದಿಯಲ್ಲಿ ವಿಚಾರಿಸಿದ್ದಾರೆ. ಪಂಚಾಯಿತಿಯವರು ನಮ್ಮಲ್ಲಿ ಅಂತಹ ಯಾವುದೇ ವ್ಯವಸ್ಥೆಯಿಲ್ಲ, ಇದರ ಹಿಂದೆ ವಂಚನೆ ಇರಬಹುದೆಂದು ತಿಳಿಸಿದ್ದಾರೆ. ಅಲ್ಲದೆ, ಅಪರಿಚಿತರು ಹೇಳಿದಂತೆ ಯಾವುದೇ ಲಿಂಕ್ಗಳನ್ನು ತೆರೆಯದಂತೆ ಗ್ರಾ.ಪಂ.ನವರು ಜಾಲತಾಣಗಳಲ್ಲಿ ಜಾಗೃತಿ ಸಂದೇಶ ರವಾನಿಸಿದ್ದಾರೆ.
