Bamboo Toothbrush Launched / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಈಗೆಲ್ಲಾ ಆರ್ಗಾನಿಕ್ ಮೇಲೆ ಜನರ ನಿಗಾ ಹೆಚ್ತಿದೆ. ಅಂತಹ ಗ್ರಾಹಕರನ್ನ ಕೇಂದ್ರಿಕರಿಸಿಕೊಂಡು ಶಿವಮೊಗ್ಗದಲ್ಲಿ ಬೊಂಬು ಟೂತ್ ಬ್ರಶ್ ಮಾರುಕಟ್ಟೆಗೆ ಬಂದಿದೆ. ಶಿಪ್ರಾಸ್ ಗ್ರೀನ್ ಪ್ರಾಡಕ್ಟ್ಸ್ ಸಂಸ್ಥೆಯು ತನ್ನ ನೂತನ ಪ್ರಾಡೆಕ್ಟ್ ಬಿದಿರಿನ ಟೂತ್ ಬ್ರಶ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಡಿಯಲ್ಲಿ ಬರುವ ಜೆಕಾಂ ಸಭೆಯಲ್ಲಿ ಈ ಉತ್ಪನ್ನವನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.
ಈ ನೂತನ ಉತ್ಪನ್ನವನ್ನು ಜೆಕಾಂ ವಲಯ ಅಧ್ಯಕ್ಷರಾದ ಸಿ ಎ ರುದ್ರೇಶ್ ಕೋರಿ ಅವರು ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಬಳಕೆಯಾಗಿ ಕಸದ ಬುಟ್ಟಿ ಸೇರುತ್ತಿರುವ ಪ್ಲಾಸ್ಟಿಕ್ ಟೂತ್ ಬ್ರಶ್ ಗಳಿಂದಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ನೈಸರ್ಗಿಕವಾದ ಬಿದಿರಿನಿಂದ ತಯಾರಿಸಲಾದ ಈ ಬಾಂಬೂ ಟೂತ್ ಬ್ರಶ್ ಅನ್ನು ಪರಿಚಯಿಸಲಾಗಿದೆ ಎಂದರು
ಜನಸಾಮಾನ್ಯರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಿ ಪರಿಸರ ಸ್ನೇಹಿ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸುವುದು ಇದರ ಪ್ರಮುಖ ಉದ್ದೇಶ ಎಂದ ಅವರು, ಜೆಕಾಂ, ಇಂತಹ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬೆಂಬಲಿಸುತ್ತಿದೆ ಎಂದರು.
ಶಿಪ್ರಾಸ್ ಗ್ರೀನ್ ಪ್ರಾಡಕ್ಟ್ಸ್ ಸಂಸ್ಥೆಯ ಮಾಲೀಕರಾದ ಜಗದೀಶ್ ಶಿಪ್ರಾ ಅವರು ಮಾತನಾಡಿ, ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಹಾಗೂ ಪ್ಲಾಸ್ಟಿಕ್ ಗೆ ಪರ್ಯಾಯವಾದ ಹಸಿರು ಉತ್ಪನ್ನಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಪರಿಸರ ಸ್ನೇಹಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ಹೊಂದಿದ್ದೇವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜೆಕಾಂ ಕೋಚ್ ಕಲ್ಪತರು ಮೋಹನ್, ಸುನೀಲ್ ಕುಮಾರ್, ಟೇಬಲ್ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಸಿ ಎ ಗೌರೀಶ್ ಭಾರ್ಗವ್ ಹಾಗೂ ಸಂದೇಶ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
