Shivamogga Youth / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಬೆಳೆಯುತ್ತಾ ಬೆಳೆಯುತ್ತಾ ನಗರದ ಜೊತೆಜೊತೆಗೆ ರೌಡಿಸಂನ ಭಾಷೆಯು ಬದಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಸ್ಟೇಷನ್ ಲಿಮಿಟ್ನಲ್ಲೊಂದು ಟೋಕನ್ ತಗೊ ಎನ್ನುತ್ತಾ ಒಬ್ಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ವಿಷಯ ವಿವರ ಹೀಗಿದೆ. ಸಾಮಾನ್ಯವಾಗಿ ಫ್ರೆಂಡ್ಸ್ ಸರ್ಕಲ್ನಲ್ಲಿ ಒಬ್ಬನಿಂದಲೇ ಟೀಗೋ…
Shivamogga Youth / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಬೆಳೆಯುತ್ತಾ ಬೆಳೆಯುತ್ತಾ ನಗರದ ಜೊತೆಜೊತೆಗೆ ರೌಡಿಸಂನ ಭಾಷೆಯು ಬದಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗದ ಸ್ಟೇಷನ್ ಲಿಮಿಟ್ನಲ್ಲೊಂದು ಟೋಕನ್ ತಗೊ ಎನ್ನುತ್ತಾ ಒಬ್ಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ವಿಷಯ ವಿವರ ಹೀಗಿದೆ.
ಸಾಮಾನ್ಯವಾಗಿ ಫ್ರೆಂಡ್ಸ್ ಸರ್ಕಲ್ನಲ್ಲಿ ಒಬ್ಬನಿಂದಲೇ ಟೀಗೋ ಡ್ರಿಂಕ್ಸ್ಗೋ ಬಿಲ್ ಕೊಡಿಸಿದ್ರೆ, ಹಾಕಿದ್ರಾ ಟೋಕನ್ ಅನ್ನೋ ಕಾಮನ್ ಲಾಂಗ್ವೆಜ್ ಇದೆ. ಅದೇ ಲಾಂಗ್ವೇಜ್ ವಸೂಲಿಗೂ ದುಷ್ಕರ್ಮಿಗಳು ಬಳಸ್ತಾರೆ ಅನ್ನೋದು ಮಾತ್ರ ಈಗೀಗ ಗೊತ್ತಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ನಗರದ ಏರಿಯಾ ಒಂದರಲ್ಲಿ 24 ವರ್ಷದ ಹುಡುಗನೊಬ್ಬನಿಗೆ ಟೋಕನ್ ತಗೊ ಅಂತಾ ಹೇಳುತ್ತಾ ಹಲ್ಲೆ ಮಾಡಿದ್ದಾರೆ.
ನಡೆದ ಘಟನೆಯಲ್ಲಿ 24 ವರ್ಷದ ಯುವಕನೊಬ್ಬನ್ನು ಇಬ್ಬರು ದುಷ್ಕರ್ಮಿಗಳು ಕ್ಯಾಂಟಿನ್ ಒಂದರ ಬಳಿಗೆ ಬರಲು ಹೇಳಿದ್ದಾರೆ. ಅಲ್ಲಿಗೆ ಬಂದಾಗ, ಅಲ್ಲಿದ್ದ ಆರೋಪಿಗಳು ಸಂತ್ರಸ್ತ ಯುವಕನ ತಮ್ಮನ ಸಂಪಾದನೆ ಜೋರಿದೆ. ಆತನಿಗೆ ಟೋಕನ್ ಹಾಕಬೇಕು ಎಲ್ಲಿದ್ಧಾನೆ ಅಂತೆಲ್ಲಾ ವಿಚಾರಿಸಿದ್ದಾರೆ. ಅದಕ್ಕೆ ಸಂತ್ರಸ್ತ ಯುವಕ ನಮ್ದೆ ನಮಗಾಗಿದೆ ಹೋಗ್ರಪ್ಪ ಅಂತಾ ಹೇಳಿ ಅಲ್ಲಿಂದ ತೆರಳಿದ್ದಾನೆ. ಆದರೆ ಆತನನ್ನು ಹಿಂಬಾಲಿಸಿದ ಆರೋಪಿಗಳು ಕನ್ಸ್ರ್ವೆನ್ಸಿಯೊಂದಕ್ಕೆ ಆತನನ್ನ ಕರೆದೊಯ್ದು ಬ್ಯಾಟ್ ಹಾಗೂ ರಾಡ್ನಿಂದ ಹಲ್ಲೆ ಮಾಡಿದ್ದಾರೆ.
ಈ ಮಧ್ಯೆ ಸಂತ್ರಸ್ತನ ಕೂಗಾಟ ಕೇಳಿ ಜನ ಸೇರುತ್ತಿದ್ದರಿಂದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಮೆಗ್ಗಾನ್ ನಲ್ಲಿ ಈತ ನೀಡಿದ ಸ್ಟೇಟ್ಮೆಂಟ್ ಅನ್ವಯ ಪೊಲೀಸರು ಸೆಕ್ಷನ್ 126(2), 352, 351(2), 109(1), 3(5) ರ ಅಡಿ ಕೇಸ್ ಮಾಡಿದ್ದಾರೆ.
