ಆನಂದಪುರದಲ್ಲಿ ಔಷಧಿ ಪಡೆದು ರೈಲಿನಲ್ಲಿ ವಾಪಸ್​ ಬರುವಾಗ ದುರಂತ! 34 ವರ್ಷದ ಹಳೆ ಫೈಲ್​ ಓಪನ್​ ! ಇನ್ನಷ್ಟು ಸುದ್ದಿಗಳು

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

shivamogga short news today / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳ ಸಂಕ್ಷಿಪ್ತ ವಿವರವನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ.ವಿಷಯ ವಿವರ ಮುಂದಿನ ಸಾಲುಗಳಲ್ಲಿದೆ.

ರೈಲ್ವೆ ಹಳಿ ಪಕ್ಕ ವೃದ್ದನ ಶವ ಪತ್ತೆ

ಆರಸಾಳು ಗ್ರಾ.ಪಂ. ವ್ಯಾಪ್ತಿಯ ಬಟಾಣಿ ಜೆಡ್ಡು ರೈಲ್ವೆ ಹಳಿ ಸಮೀಪ ಶುಕ್ರವಾರ ವೃದ್ಧರೊಬ್ಬರ ಶವ ಪತ್ತೆಯಾಗಿದೆ. ಶಿವಮೊಗ್ಗ ಸಮೀಪದ ಕೊನಗವಳ್ಳಿಯ ಗೋಪಾಲಪ್ಪ (80) ಮೃತಪಟ್ಟವರು. ಆನಂದಪುರಂಗೆ ಔಷಧ ತರಲೆಂದು ಹೋಗಿದ್ದು, ರೈಲಿನಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ರಿಪನ್ ಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಶಿವಮೊಗ್ಗ: ಕಳೆದ 34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿರುವ ತೀರ್ಥಹಳ್ಳಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಾಗರದ ಶೇಖರ್ ಎಂಬಾತನ ವಿರುದ್ಧ 1990ರಲ್ಲಿ ಮೂರು ಕಳವು ಪ್ರಕರಣಗಳು ದಾಖಲಾಗಿದ್ದವು, ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ . ಈತನನ್ನು ತೀರ್ಥಹಳ್ಳಿ ಠಾಣೆ ಪತ್ತೆ ಮಾಡಿದೆ.

ಜೆ.ಕೆ. ಸುರೇಶ್ ಕುಮಾರ್ (ಜೈಸು) ನಿಧನ

ಶಿಕಾರಿಪುರ: ಪಟ್ಟಣದ ಪುರಸಭೆ ಮಾಜಿ ಸದಸ್ಯ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಜೆ.ಕೆ. ಸುರೇಶ್ ಕುಮಾ‌ರ್ (ಜೈಸು) (64) ಬೆಂಗಳೂರಿನಲ್ಲಿ ಶುಕ್ರವಾರ ನಿಧನ ಹೊಂದಿದರು. ಮೃತರಿಗೆ ಪತ್ನಿ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಶಿವಮೊಗ್ಗ ಪ್ರತಿಭಾ ರಂಗ ವೇದಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೃತರ ಅಂತ್ಯಕ್ರಿಯೆಯನ್ನುಶುಕ್ರವಾರ ಬೆಂಗಳೂರಿನ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor