ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಹಾಗೂ ಸಾಮಾನ್ಯ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಂಚಿಕೊಳ್ಳಿ
WhatsApp Facebook X Telegram
Shivamogga malenadu toda image
Shivamogga

Sainik School Kodagu Recruitment 2026 / ಮಲೆನಾಡು ಟುಡೆ ಸುದ್ದಿ / ಕೊಡಗು / ಕುಶಾಲನಗರದ ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯಲ್ಲಿ ಖಾಲಿ ಇರುವ ವಿವಿಧ ಕಾಯಂ ಹುದ್ದೆಗಳ ಭರ್ತಿಗೆ ಅರ್ಜಿಆಹ್ವಾನಿಸಲಾಗಿದೆ. ರಕ್ಷಣಾ ಸಚಿವಾಲಯದ ಸೈನಿಕ ಶಾಲೆಗಳ ಸೊಸೈಟಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸ್ವಾಯತ್ತ ಸಂಸ್ಥೆಯಲ್ಲಿ ಒಟ್ಟು 5 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ವಿಷಯ ವಿವರ ಹೀಗಿದೆ.

ರಸಾಯನಶಾಸ್ತ್ರ ವಿಭಾಗದ ಸ್ನಾತಕೋತ್ತರ ಶಿಕ್ಷಕ (ಪಿಜಿಟಿ) 1 ಹುದ್ದೆಯನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ. ಅದೇ ರೀತಿ ಇಂಗ್ಲಿಷ್ ಪದವೀಧರ ಶಿಕ್ಷಕ (ಟಿಜಿಟಿ) 1 ಹುದ್ದೆ ಪರಿಶಿಷ್ಟ ಜಾತಿಗೆ, ಹಿಂದಿ ಪದವೀಧರ ಶಿಕ್ಷಕ 1 ಹುದ್ದೆ ಪರಿಶಿಷ್ಟ ಪಂಗಡಕ್ಕೆ ಹಾಗೂ ಸಮಾಜ ವಿಜ್ಞಾನ ಪದವೀಧರ ಶಿಕ್ಷಕ 1 ಹುದ್ದೆಯನ್ನು ಹಿಂದುಳಿದ ವರ್ಗಕ್ಕೆ ನಿಗದಿಪಡಿಸಲಾಗಿದೆ. ಇದರೊಂದಿಗೆ ಸಾಮಾನ್ಯ ಉದ್ಯೋಗಿ ವಿಭಾಗದ 1 ಕಾಯ್ದಿರಿಸದ ಹುದ್ದೆಗೂ ಅರ್ಜಿ ಕರೆಯಲಾಗಿದೆ.

ಮೀಸಲಾತಿ ನಿಯಮಗಳು, ವೇತನ ಶ್ರೇಣಿ ಹಾಗೂ ಅರ್ಜಿ ನಮೂನೆ ಸೇರಿದಂತೆ ವಿವರವಾದ ಮಾಹಿತಿಗಾಗಿ ಶಾಲೆಯ ಅಧಿಕೃತ ವೆಬ್‌ಸೈಟ್ www.sainikschoolkodagu.edu.in ಅನ್ನು ಆಗಸ್ಟ್ 1, 2026 ರಿಂದ ಸಂಪರ್ಕಿಸಬಹುದಾಗಿದೆ.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 21, 2026 ಕೊನೆಯ ದಿನಾಂಕವಾಗಿದೆ. ಆಡಳಿತಾತ್ಮಕ ಕಾರಣಗಳಿಗಾಗಿ ಈ ನೇಮಕಾತಿಯನ್ನು ರದ್ದುಪಡಿಸುವ ಸಂಪೂರ್ಣ ಹಕ್ಕನ್ನು ಶಾಲಾ ಆಡಳಿತ ಮಂಡಳಿ ಕಾಯ್ದಿರಿಸಿಕೊಂಡಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಅಧಿಕೃತವಾಗಿ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor