ಆಗಸ್ಟ್ 05 ರಂದು ಶಿವಮೊಗ್ಗದಲ್ಲಿ ಮಾನ್ಸೂನ್ ಮಾರಾಟ ಮೇಳ! ರೇಷ್ಮೆ ಸೀರೆಗಳ ನೇರ ಮಾರಾಟ

Published: 31 ಜುಲೈ 2026, 8:31 ಫೂರ್ವಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

District Vokkaligara Mahila Vedike / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಪಂಪನಗರ 2ನೇ ತಿರುವು ಗುತ್ತ್ಯಪ್ಪ ಕಾಲೋನಿ, ಇಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಾನ್ಸೂನ್ ಮಾರಾಟ ಮೇಳವನ್ನು ಆ.05 ರಂದು ಆಯೋಜಿಸಲಾಗಿದೆ, ಈ ಬಗ್ಗೆ ಮಲೆನಾಡು ಟುಡೆ ಇಮೇಲ್​ಗೆ ಪ್ರಕಟಣೆಯನ್ನು ನೀಡಲಾಗಿದ್ದು, ವಿಷಯ ವಿವರ ಹೀಗಿದೆ. ಸುಮಾರು…

District Vokkaligara Mahila Vedike / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಪಂಪನಗರ 2ನೇ ತಿರುವು ಗುತ್ತ್ಯಪ್ಪ ಕಾಲೋನಿ, ಇಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಮಾನ್ಸೂನ್ ಮಾರಾಟ ಮೇಳವನ್ನು ಆ.05 ರಂದು ಆಯೋಜಿಸಲಾಗಿದೆ, ಈ ಬಗ್ಗೆ ಮಲೆನಾಡು ಟುಡೆ ಇಮೇಲ್​ಗೆ ಪ್ರಕಟಣೆಯನ್ನು ನೀಡಲಾಗಿದ್ದು, ವಿಷಯ ವಿವರ ಹೀಗಿದೆ.

ಸುಮಾರು 36 ವರ್ಷದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಕೊಡುತ್ತಾ ಬರುತ್ತಿರುವ ಈ ಸಂಘವು ಕಾಂಚಿಪುರಂನಿಂದ ಬರುತ್ತಿರುವ ರೇಷ್ಮೆ ಸೀರೆಗಳ ನೇರ ಮಾರಾಟ, ಕಾಶಿ ಇಂದ ಬನಾರಸ್ ಸೀರೆಗಳು, ಫ್ಯಾನ್ಸಿ ಸೀರೆಗಳು, ಡ್ರೆಸ್ ಗಳು, ಬೆಡ್ ಲೈನರ್, ಗೃಹಪಯೋಗಿ ವಸ್ತುಗಳು, ಅಲಂಕಾರಿಕ ಸಾಮಾಗ್ರಿಗಳು, ಮನೆಯಲ್ಲಿ ತಯಾರಿಸಿದ ರುಚಿಕರ ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟವನ್ನು ನಡೆಸಲಿದೆ.

ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುತ್ತಿರುವ ಮಹಿಳಾ ಉದ್ಯಮಿಗಳನ್ನು ಕಾರ್ಯಕ್ರಮಕ್ಕೆ ಹುರಿದುಂಬಿಸಲು ಆಹ್ವಾನಿಸಲಾಗುತ್ತಿದೆ. ಮಲೆನಾಡಿನ ತಿಂಡಿ ತಿನಿಸುಗಳ ಸ್ಟಾಲ್ ಗಳನ್ನು ಹಳೆಯ ಝರಿ ಸೀರೆಯನ್ನು ಒಳ್ಳೆಯ ಬೆಲೆಯಲ್ಲಿ ತೆಗೆದುಕೊಳ್ಳಲಾಗುವುದು.

ಸಂಘದ ಅಧ್ಯಕ್ಷೆ ಸುಮಿತ್ರಾ ಕೇಶವ್ ಮೂರ್ತಿ, ಕಾರ್ಯದರ್ಶಿ ನಳಿನಿ ಜಯರಾಮ್ ಹಾಗೂ ಖಜಾಂಜಿ ಸುಜಾತ ವೆಂಕಟೇಶ್, ಕಮಿಟಿ ಹಾಗೂ ಸಂಘದ ಸದಸ್ಯನಿಯರು ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9448912789, 9448792064, 7019750556 ನ್ನು ಸಂಪರ್ಕಿಸಬಹುದಾಗಿದೆ.

END OF STORY

ajjimane ganesh

Senior Journalist | Malenadu Today
✓ Verified Journalist