ಶಿವಮೊಗ್ಗ : ಚಿಕಿತ್ಸೆಗೆ ಮಣಿಪಾಲ್​​ಗೆ ಕರೆದೊಯ್ಯುತ್ತಿದ್ದ ವೇಳೆ 3 ತಿಂಗಳ ಮಗು ಸಾವು

ಹಂಚಿಕೊಳ್ಳಿ
WhatsApp Facebook X Telegram
Baby Dies En Route to Manipal After Breakdown
Baby Dies En Route to Manipal After Breakdown

ಶಿವಮೊಗ್ಗ : ಶ್ವಾಸಕೋಶ ಸೋಂಕಿನ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ದಾವಣಗೆರೆಯಿಂದ ಮಣಿಪಾಲಿಗೆ ಜೀರೋ ಟ್ರಾಫಿಕ್‌ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿಯೇ ಮಗು ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ಅನ್ವಿತಾ (3 ತಿಂಗಳು) ಮೃತಪಟ್ಟ ದುರ್ದೈವಿ ಮಗು.

Baby Dies ಘಟನೆಯ ವಿವರ:

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡಿ ಗ್ರಾಮದ ಹನುಮತೇಶ್ ಹಾಗೂ ಪವಿತ್ರ ದಂಪತಿಗೆ ಮೂರು ತಿಂಗಳ ಹಿಂದೆ ಹೆಣ್ಣು ಮಗುವೊಂದು ಜನಿಸಿತ್ತು. ಆ ಮಗು ಕೆಲ ದಿನಗಳಿಂದ ಶ್ವಾಸಕೋಶ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದ  ಹಿನ್ನೆಲೆ ಮಗುವನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದ ಕಾರಣ,ದಾವಣಗೆರೆಯಿಂದ ಮಣಿಪಾಲಿಗೆ ಶಿಫ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರ ನೆರವಿನಿಂದ ಜೀರೋ ಟ್ರಾಫಿಕ್ ಮಾಡಿ ಮಗುವನ್ನು ದಾವಣಗೆರೆ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲು ತಯಾರಿ ಮಾಡಿಕೊಳ್ಳಲಾಗಿತ್ತು.

ಮಾರ್ಗಮಧ್ಯೆ ಆಂಬುಲೆನ್ಸ್ ಟೈರ್ ಪಂಚರ್, ವ್ಯರ್ಥವಾಯ್ತು ಶ್ರಮ:

ಪೊಲೀಸರು ಜೀರೋ ಟ್ರಾಫಿಕ್ ಮುಖಾಂತರ ಮಗುವನ್ನು ದಾವಣಗೆರೆಯಿಂದ ಮಣಿಪಾಲಿಗೆ ಶಿಫ್ಟ್ ಮಾಡಲು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಆದರೆ ಪ್ರಯತ್ನವೇನೋ ಇತ್ತು, ಆದರೆ ವಿಧಿಯ ಆಟವೇ ಬೇರೆಯಿತ್ತು. ದಾವಣಗೆರೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ಆಂಬುಲೆನ್ಸ್ ಟೈರ್ ಪಂಚರ್ ಆಯಿತು. ಟೈರ್ ಬದಲಿಸಲು ಕೆಲಕಾಲ ಸಮಯ ತೆಗೆದುಕೊಂಡ ಕಾರಣ ಕ್ಷಣದಿಂದ ಕ್ಷಣಕ್ಕೆ ಮಗುವಿನ ಆರೋಗ್ಯ ಹದಗೆಡುತ್ತಿತ್ತು. ಈ ಹಿನ್ನೆಲೆಯಲ್ಲಿ ಮಾರ್ಗಮಧ್ಯೆ ಎಲ್ಲಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸೋಣ ಎಂದು ಕೂಡಲೇ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ಇದರಿಂದ ಪೊಲೀಸರು ಹಾಗೂ ವೈದ್ಯರ ಶ್ರಮ ವ್ಯರ್ಥವಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor