ತುಂಗಾ ನದಿ ಬದಿಯಲ್ಲಿ ಸಿಕ್ಕ ಮೊಬೈಲು ವೇಲು ಆಧರಿಸಿ ಮಹಿಳೆಗಾಗಿ ಸರ್ಚಿಂಗ್ ಆಪರೇಷನ್​! ಅಪ್​ಡೇಟ್ ಇಲ್ಲಿದೆ

Published: 31 ಜುಲೈ 2026, 8:17 ಫೂರ್ವಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

Tunga River / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ/ ನಿನ್ನೆ ದಿನದ ನಗರದ ಹೊಳೆ ಬಸ್​ಸ್ಟಾಪ್ ಬಳಿಯಲ್ಲಿ ತುಂಗಾ ದಿಗೆ ಮಹಿಳೆಯೊಬ್ಬರು ಹಾರಿರುವ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ಅಲ್ಲಿನ ಸ್ಥಳೀಯ ಶ್ರೀನಿವಾಸ್​ ಎಂಬವರು ಮಲೆನಾಡು ಟುಡೆಗೆ ರಿಪೋರ್ಟ್ ನೀಡಿದ್ದಾರೆ. ಮಹಿಳೆಯೊಬ್ಬರು ಹೊಳೆಗೆ ಹಾರಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಹೊಳೆ ಬದಿಯಲ್ಲಿ ವೇಲ್​ ಹಾಗೂ ಮೊಬೈಲ್​…

Tunga River / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ/ ನಿನ್ನೆ ದಿನದ ನಗರದ ಹೊಳೆ ಬಸ್​ಸ್ಟಾಪ್ ಬಳಿಯಲ್ಲಿ ತುಂಗಾ ದಿಗೆ ಮಹಿಳೆಯೊಬ್ಬರು ಹಾರಿರುವ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ಅಲ್ಲಿನ ಸ್ಥಳೀಯ ಶ್ರೀನಿವಾಸ್​ ಎಂಬವರು ಮಲೆನಾಡು ಟುಡೆಗೆ ರಿಪೋರ್ಟ್ ನೀಡಿದ್ದಾರೆ.

ಮಹಿಳೆಯೊಬ್ಬರು ಹೊಳೆಗೆ ಹಾರಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಹೊಳೆ ಬದಿಯಲ್ಲಿ ವೇಲ್​ ಹಾಗೂ ಮೊಬೈಲ್​ ಒಂದು ಪತ್ತೆಯಾಗಿತ್ತು. ಹೀಗಾಗಿ ಅನುಮಾನ ಬಲವಾದ್ದರಿಂದ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ತಡ ರಾತ್ರಿಯವರೆಗೆ ಶೋಧ ಕಾರ್ಯ ನಡೆಸಿದೆ.

ನಗರದ ಹೊಳೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಕಾಲುದಾರಿಯ ಮೂಲಕ ಹೋಗಿ ನದಿಗೆ ಹಾರಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದು, ಅದರ ಆಧಾರದ ಮೇಲೆ ಶೋಧ ಕಾರ್ಯ ನಡೆಯಿತು.

ಆದರೆ, ಮಹಿಳೆ ಪತ್ತೆಯಾಗಿಲ್ಲ. ಸ್ಥಳೀಯರು ತಿಳಿಸಿದಂತೆ ನದಿಗೆ ಹಾರಿರುವ ಜಾಗದಲ್ಲಿ ವೇಲ್ ಮತ್ತು ಮೊಬೈಲ್ ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸುಮಾರು 30-35 ವರ್ಷದವರೆಂದು ತಿಳಿದುಬಂದಿದೆ.

END OF STORY

ajjimane ganesh

Senior Journalist | Malenadu Today
✓ Verified Journalist