ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದ ಅರ್ಚಕ ಪರಮೇಶ್ವರ ಭಟ್ ಇನ್ನಿಲ್ಲ!

ಹಂಚಿಕೊಳ್ಳಿ
WhatsApp Facebook X Telegram
Ramanna Shreshti Park Sri Ganapathi Temple Priest Parameshwara Bhat Passes Away.
Ramanna Shreshti Park Sri Ganapathi Temple Priest Parameshwara Bhat Passes Away.

Ramanna Shreshti Park Sri Ganapathi Temple / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿರುವ ಗಣಪತಿ ದೇವಾಲಯದ ಅರ್ಚಕರಾಗಿದ್ದ ಪರಮೇಶ್ವರ ಭಟ್ (65) ರವರು ನಿಧನರಾಗಿದ್ದಾರೆ. ನಿನ್ನೆದಿನ ಗುರುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇವರು ನಿಧನರಾದರು.

ಮಗನ ಮದುವೆ ಬಳಿಕ, ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದ ಪರಮೇಶ್ವರ ಭಟ್​ ಇತ್ತೀಚೆಗಷ್ಟೆ ಶಿವಮೊಗ್ಗಕ್ಕೆ ಬಂದು ಹೋಗಿದ್ದರು. ಆರೋಗ್ಯವಾಗಿದ್ದ ಪರಮೇಶ್ವರ್​ ಭಟ್​ ನಿನ್ನೆ ಗುರುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಗಣಪತಿ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಾ ಜನಮಾನಸಲ್ಲಿ ಚಿರಪರಿಚಿತರಾಗಿದ್ದರು, ಸಾವಿರಾರು ಮಂದಿ ಪರಮೇಶ್ವರ್ ಭಟ್​ರಿಗೆ ವಿಶೇಷ ಗೌರವ ನೀಡುತ್ತಿದ್ದರು.

ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಪಾರ್ಥಿವ ಶರೀರ ಶನಿವಾರ ನಗರದ ಎಸ್‌ಪಿಎಂ ರಸ್ತೆಯಲ್ಲಿನ ಅವರ ನಿವಾಸಕ್ಕೆ ಆಗಮಿಸಲಿದ್ದು, ಬೆಳಗ್ಗೆ 11ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿರಲಿದೆ. ರೋಟರಿ ಚಿತಾಗಾರದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇನ್ನೂ ಮೃತರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಸಂಸದ ಬಿ.ವೈ. ರಾಘವೇಂದ್ರ , ಈ ಕುರಿತಾಗಿ ತಮ್ಮ ಅಧಿಕೃತ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಬರೆದಿದ್ದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor