ಶಿವಮೊಗ್ಗ ಕಾಂಗ್ರೆಸ್​​​ಗೆ ಯುವಕರ ಭವಿಷ್ಯಕ್ಕಿಂತ ರಾಜಕೀಯವೇ ಮುಖ್ಯ : ಬಿ,ವೈ ರಾಘವೇಂದ್ರ

Published: 25 ಜುಲೈ 2026, 1:02 ಅಪರಾಹ್ನ • 1 min read

BY Raghavendra ಶಿವಮೊಗ್ಗ : ದೆಹಲಿಯಲ್ಲಿ ನೀಟ್ ಅಕ್ರಮ ಖಂಡಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದೆ ದೇಶವಿರೋಧಿ ಶಕ್ತಿಗಳು ಹಾಗೂ ಕಾಂಗ್ರೆಸ್‌ನ ರಾಜಕೀಯ ಷಡ್ಯಂತ್ರವಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ: ಬಿಜೆಪಿಯ ಮುಖಂಡರು ಮನೆಗೆ ಬರ್ತಾರೆ, ವಿಚಾರಿಸಿ ಧನ್ಯವಾದ ಹೇಳಿ ಹೋಗ್ತಾರೆ: ಶಾಸಕ ಎಸ್. ಎನ್. ಚನ್ನಬಸಪ್ಪ 

ಇಂದು ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ನೀಟ್ ವಿಚಾರದಲ್ಲಿ ಅತ್ಯಂತ ಸ್ಪಷ್ಟ ಹಾಗೂ ಬಿಗಿಯಾದ ನಿಲುವು ತಳೆದಿದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಕಾಯ್ದೆಯನ್ನು ಬರುವ ಸೋಮವಾರವೇ ಸಂಸತ್ತಿನಲ್ಲಿ ಮಂಡಿಸಲಾಗುವುದು. ತಪ್ಪಿತಸ್ಥರಿಗೆ ಇದ್ದ 1 ಕೋಟಿ ರೂ. ದಂಡವನ್ನು 10 ಕೋಟಿ ರೂ.ಗೆ ಏರಿಸಿ, 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕುರಿತು ಚರ್ಚೆ ನಡೆದಿದೆ ಎಂದರು.

ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಎಂದಿಗೂ ಯುವಜನತೆಯ ಭವಿಷ್ಯ ರೂಪಿಸುವ ಕೆಲಸ ಮಾಡಿಲ್ಲ. ಕೇವಲ ರಾಜಕೀಯ ಮಾಡುವುದೇ ಅವರ ಉದ್ದೇಶವಾಗಿದೆ. ಮೋದಿ ಸರ್ಕಾರ ಬಂದ ನಂತರ ಯುವಕರ ಹಿತದೃಷ್ಟಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳ ನ್ಯಾಯಯುತ ಹೋರಾಟದ ಮಧ್ಯೆ ದೇಶವಿರೋಧಿ ಶಕ್ತಿಗಳು ನುಸುಳಿದ್ದು, ಉಗ್ರ ಉಮರ್ ಖಾಲಿದ್ ಫೋಟೋಗಳನ್ನು ಬಳಸಿ ಟೂಲ್ ಕಿಟ್ ಮೂಲಕ ಹೋರಾಟವನ್ನು ಹಾದಿತಪ್ಪಿಸಲಾಗುತ್ತಿದೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ರಾಜಕೀಯ ಹೆಚ್ಚಾಗಿದೆ. ಶಿವಮೊಗ್ಗದ ಬಿಜೆಪಿ ಕಚೇರಿಗೆ ನುಗ್ಗಿ ಕಲ್ಲು, ಮೊಟ್ಟೆ ತೂರುವ ಷಡ್ಯಂತ್ರ ನಡೆಸಲಾಗಿದೆ. ಬೆಂಗಳೂರಿನಲ್ಲಿ ಶಾಸಕ ಹರೀಶ್ ಹಾಗೂ ಶಾಸಕ-ಸಂಸದರು ಸಂಚರಿಸುತ್ತಿದ್ದ ಪೊಲೀಸ್ ವಾಹನಗಳ ಮೇಲೆಯೇ ಹಲ್ಲೆ ನಡೆಸಿ ಲಾವಾಚಾರ್ಜ್ ಮಾಡಲಾಗಿದೆ. ಈ ರೀತಿಯ ಕೀಳುಮಟ್ಟದ ರಾಜಕೀಯವನ್ನು ಬಿಟ್ಟು, ವಿಚಾರಧಾರೆಯ ಆಧಾರದ ಮೇಲೆ ಚರ್ಚೆ ಮಾಡಿ ಸರ್ಕಾರ ಆಡಳಿತ ನಡೆಸಲಿ ಎಂದು ತಿರುಗೇಟು ನೀಡಿದರು.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Prathapa thirthahalli

Senior Journalist | Malenadu Today
✓ Verified Journalist