200 ರೂಪಾಯಿಯ 90 ನೋಟುಗಳ ಮೇಲೆ ರಿಸರ್ವ್​​ಬ್ಯಾಂಕ್​​ ಬದಲು ಇತ್ತು ಈ ಹೆಸರು, ಆರೋಪಿಗಳು ಬಂಧನ

ಹಂಚಿಕೊಳ್ಳಿ
WhatsApp Facebook X Telegram
Fake Currency Racket
Fake Currency Racket

Fake Currency Racket ಮೂಡಿಗೆರೆ : ಮೂಡಿಗೆರೆಯಲ್ಲಿ ಸಾರ್ವಜನಿಕರಿಗೆ ವಂಚಿಸಿ ನಕಲಿ ನೋಟುಗಳನ್ನು ಚಲಾವಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಕೋರ್ಟ್​ನಲ್ಲಿ ಕೆಲಸ! 62 ಹುದ್ದೆಗಳಿಗೆ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನ

ಮಂಗಳೂರು ಮೂಲದ ಮಹಮದ್ ಅಲಿ ಹಾಗೂ ಮೂಡಿಗೆರೆಯ ಮಹೇಶ್ ಬಂಧಿತ ಆರೋಪಿಗಳು. ಇವರಿಂದ 200 ಮುಖಬೆಲೆಯ ಒಟ್ಟು 90 ಖೋಟಾ ನೋಟುಗಳನ್ನು ಒಟ್ಟು 18,000 ರೂಪಾಯಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬಂಧಿತರಿಂದ ವಶಪಡಿಸಿಕೊಂಡ ನಕಲಿ ನೋಟುಗಳನ್ನು ಪರಿಶೀಲಿಸಿದಾಗ ಅಸಲಿ ನೋಟಿನಲ್ಲಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಸರು ಬದಲು ಬಿಸರ್ವ್ ಬ್ಯಾಂಕ್ ಆಫ್ ಇಂಡಿಯಾಎಂದು ಮುದ್ರಣಗೊಂಡಿರುವುದು ಬೆಳಕಿಗೆ ಬಂದಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ನಕಲಿ ನೋಟುಗಳ ಜಾಲದ ಮೂಲ ಎಲ್ಲಿದೆ ಹಾಗೂ ಇದರ ಹಿಂದೆ ಯಾರಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor