Tree Falls ರಿಪ್ಪನ್ ಪೇಟೆ : ಮಲೆನಾಡು ಭಾಗದಲ್ಲಿ ಗಾಳಿ-ಮಳೆಯಿಂದಾಗಿ ಬೃಹತ್ ಮರವೊಂದು ಧರೆಗುರುಳಿದ ಪರಿಣಾಮ ಕಾಲೇಜು ವಿದ್ಯಾರ್ಥಿನಿಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೆಸಾನಿ ಗ್ರಾಮದ ಬಳಿ ನಡೆದಿದೆ.
ಶಿವಮೊಗ್ಗ : ಜುಲೈ 25 ಮತ್ತು 26 ರಂದು ಮತದಾರರ ಪಟ್ಟಿಯ ವಿಶೇಷ ಪ್ರಚಾರ ದಿನ
Tree Falls ಘಟನೆಯ ವಿವರ
ಗಾಯಗೊಂಡ ಯುವತಿಯನ್ನು ಹಿರೆಸಾನಿ ಗ್ರಾಮದ ಶೇಖರಪ್ಪ ಎಂಬುವರ ಪುತ್ರಿ, ಗರ್ತಿಕೆರೆ ಕಾಲೇಜಿನ ವಿದ್ಯಾರ್ಥಿನಿ ನಿಖಿತಾ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ತರಗತಿ ಮುಗಿಸಿ ತಮ್ಮ ಇಬ್ಬರು ಗೆಳತಿಯರೊಂದಿಗೆ ಮನೆಗೆ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಸಂಚರಿಸುವ ಮಾರ್ಗ ಮಧ್ಯೆ ಭಾರಿ ಗಾಳಿ-ಮಳೆಗೆ ಲೈನ್‌ವೈರ್‌ಗಳು ನೆಲಕ್ಕೆ ಬಿದ್ದಿದ್ದನ್ನು ಕಂಡು ಆತಂಕಗೊಂಡ ವಿದ್ಯಾರ್ಥಿನಿಯರು ಹಿಂದೆ ಓಡಲು ಯತ್ನಿಸಿದ್ದಾರೆ. ಆದರೆ, ಅದೇ ಕ್ಷಣದಲ್ಲಿ ರಸ್ತೆ ಬದಿಯಲ್ಲಿದ್ದ ದೊಡ್ಡ ಮರವೊಂದು ಆಕೆಯ ಮೇಲೆಯೇ ಉರುಳಿಬಿದ್ದಿದೆ.
ದುರ್ಘಟನೆಯಲ್ಲಿ ನಿಖಿತಾ ಅವರ ಎಡಗಾಲು ಸಂಪೂರ್ಣ ಮುರಿದು ಗಂಭೀರ ಗಾಯಗಳಾಗಿವೆ. ವಿದ್ಯಾರ್ಥಿನಿಯ ಚೀರಾಟ ಕೇಳಿ ಸ್ಥಳೀಯರು ಕೂಡಲೇ ಧಾವಿಸಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ತುರ್ತು ಶಸ್ತ್ರಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದ್ದಾರೆ.
