ripponpete shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಿಪ್ಪನ್ಪೇಟೆ: ಹಬ್ಬಗಳಿಗೆ ಇನ್ನೂ ಎರಡು ತಿಂಗಳುಗಳಿರುವಾಗಲೇ ರಿಪ್ಪನ್ ಪೇಟೆಯಲ್ಲಿ ಪೊಲೀಸ್ ಪಥಸಂಚಲನ ನಡೆಸಿರುವುದು ಕುತೂಹಲ ಮೂಡಿಸಿದೆ. ನಿನ್ನೆ ದಿನ ರಿಪ್ಪನ್ಪೇಟೆಯಲ್ಲಿ ಪೊಲೀಸ್ ಇಲಾಖೆ ರೂಟ್ ಮಾರ್ಚ್ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿತು.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶಿವಮೊಗ್ಗ ಎಸ್ಪಿ ನಿಖಿಲ್ ಬಿ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ನೀಡಿದ್ದು, ಜಾಗೃತಿ ಮೂಡಿಸುವ ಸಲುವಾಗಿ ರೂಟ್ ಮಾರ್ಚ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರಾಜುರೆಡ್ಡಿ ನೇತೃತ್ವದಲ್ಲಿ ತಮ್ಮ ಪೊಲೀಸ್ ಸಿಬ್ಬಂದಿ, ಎಸ್.ಎ.ಎಫ್ ವಿಶೇಷ ಪೊಲೀಸ್ ಪಡೆಯ ಪೊಲೀಸರು ಠಾಣೆಯಿಂದ ಹೊರಟು ವಿನಾಯಕ ವೃತ್ತದ. ಮೂಲಕ ಹೊಸನಗರ-ಸಾಗರ- ತೀರ್ಥಹಳ್ಳಿ, ಶಿವಮೊಗ್ಗ ನಾಲ್ಕು ರಸ್ತೆಯಲ್ಲಿ ಜಾಥಾ ನಡೆಸಿ ಜನರಲ್ಲಿ ಶಾಂತಿ ಸುವ್ಯವಸ್ಥೆಯ ಬಗ್ಗೆ ಜನಜಾಗೃತಿ ಮೂಡಿಸಿದರು. ರಿಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರಾಜುರೆಡ್ಡಿ, ಎಸ್ ಎಎಫ್ ವಿಶೇಷ ಪೊಲೀಸ್ ಪಡೆಯ ಇನ್ಸ್ಪೆಕ್ಟರ್ಕಿರಣ್. ಎಎಸ್ಐಗಳಾದ ಹಾಲಪ್ಪ, ವಿನೋದ್ ಹಾಜರಿದ್ದರು.
