ಶಿವಮೊಗ್ಗ : ಬ್ಯಾಂಕ್​ನಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ವಸ್ತುಗಳು ಬೆಣಕಿಗಾಹುತಿ

ಹಂಚಿಕೊಳ್ಳಿ
WhatsApp Facebook X Telegram
Massive Fire Outbreak at Union Bank in Shivamogga 
Massive Fire Outbreak at Union Bank in Shivamogga 

Massive Fire Outbreak ಶಿವಮೊಗ್ಗ. ನಗರದ ಬಿ.ಹೆಚ್. ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೂನಿಯನ್ ಬ್ಯಾಂಕ್​​ ಶಾಖೆಯಲ್ಲಿ ನಿನ್ನೆ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಕಚೇರಿಯಲ್ಲಿದ್ದ ಬಹುತೇಕ ಪರಿಕರಗಳು ಬೆಂಕಿಗಾಹುತಿಯಾಗಿವೆ.

ಅಡ್ಡಮತದಾನ! ಶಿವಮೊಗ್ಗದ ಇಬ್ಬರು ಶಾಸಕರಿಂದಲೇ ಕಾಂಗ್ರೆಸ್​ಗೆ ವೋಟ್ : ಆರ್​ಎಂ ಮಂಜುನಾಥ ಗೌಡ 

ಶಾರ್ಟ್ ಸರ್ಕ್ಯೂಟ್ ಪರಿಣಾಮವಾಗಿ ಈ ಅಗ್ನಿ ದುರಂತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಡರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಇಂದು ಮುಂಜಾನೆ ಎಂದಿನಂತೆ ಸಿಬ್ಬಂದಿ ಬ್ಯಾಂಕ್ ಬಾಗಿಲು ತೆರೆದಾಗ ಇಡೀ ಕಚೇರಿ ಸುಟ್ಟು ಕರಕಲಾಗಿರುವ ದೃಶ್ಯ ಬೆಳಕಿಗೆ ಬಂದಿದೆ

ಬೆಂಕಿಯ ಜ್ವಾಲೆಗೆ ಬ್ಯಾಂಕ್‌ನಲ್ಲಿದ್ದ ಕಂಪ್ಯೂಟರ್‌ಗಳು, ಸರ್ವರ್ ಸಿಸ್ಟಮ್‌ಗಳು, ಏರ್ ಕೂಲರ್‌ಗಳು ಹಾಗೂ ಇತರೆಲ್ಲಾ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಇದರೊಂದಿಗೆ ಕಚೇರಿಯಲ್ಲಿದ್ದ ಪೀಠೋಪಕರಣಗಳು ಸಹ ಸುಟ್ಟ ಕರಕಲಾಗಿದೆ.

ಸದ್ಯ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಸಂಪೂರ್ಣ ಪರಿಶೀಲನೆ ನಡೆಸುತ್ತಿದ್ದಾರೆ. 

Massive Fire Outbreak at Union Bank in Shivamogga 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor