ಊಟ, ವಸತಿಯ ಜೊತೆಗೆ ಉಚಿತ ಕೋರ್ಸ್​!ಕಲಿಯುತ್ತಲೇ ಸಂಪಾದಿಸುವ ಅವಕಾಶ! ಇಲ್ಲಿದೆ ಮಾಹಿತಿ!

Free Hotel Management Course ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ / ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಗಿಸಿ ಮುಂದೇನು ಎಂಬ ಚಿಂತೆಯಲ್ಲಿದ್ದೀರಾ? ಹಣಕಾಸಿನ ಸಮಸ್ಯೆಯಿಂದ ಇಷ್ಟಪಟ್ಟ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದೆ ತಳಮಳದಲ್ಲಿದ್ದೀರಾ? ವೃತ್ತಿ ಕೌಶಲವಿಲ್ಲದೆ ಉದ್ಯೋಗಕ್ಕಾಗಿ ಅಲೆಯುತ್ತಿದ್ದೀರಾ? ಹಾಗಿದ್ದರೆ ಇಲ್ಲೊಂದು ಅವಕಾಶ ನಿಮಗೆ ಸಹಾಯವಾಗಬಲ್ಲದು.ಈ ನಿಟ್ಟಿನಲ್ಲಿ ಶಿವಮೊಗ್ಗದ ‘ಆರ್ಯ ಚಾರಿಟೇಬಲ್ ಟ್ರಸ್ಟ್’ ಹೊಸದೊಂದು ರೀತಿಯ ಅವಕಾಶವನ್ನು ಒದಗಿಸುತ್ತಿದೆ. ಅದರ ಬಗೆಗಿನ ವಿವರ ಹೀಗಿದೆ.

ವೇಗವಾಗಿ ಬೆಳೆಯುತ್ತಿರುವ Hospitality & Hotel Management ಕ್ಷೇತ್ರದಲ್ಲಿ ಉಚಿತ ತರಬೇತಿ, ಉಚಿತ ವಸತಿ ಹಾಗೂ ಊಟದ ಜೊತೆಗೆ ಕಲಿಯುವಾಗಲೇ ಪ್ರತಿ ತಿಂಗಳು ರೂ. 6,000 ಶಿಷ್ಯವೇತನ (Stipend) ನೀಡುವ ಯೋಜನೆಯನ್ನು ಸಂಸ್ಥೆ ಪ್ರಕಟಿಸಿದೆ.

‘ಕಲಿಯುತ್ತಲೇ ಸಂಪಾದಿಸಿ’ (Earn While You Learn) – ಏನಿದು ಯೋಜನೆ?

ನಮ್ಮ ದೇಶವೂ 2047ರ ಹೊತ್ತಿಗೆ ‘ವಿಕಸಿತ ಭಾರತ’ವಾಗುವ ಗುರಿಯತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮವು ಮುಂದಿನ ದಿನಗಳಲ್ಲಿ ಅತಿ ದೊಡ್ಡ ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿ ಹೊರಹೊಮ್ಮಲಿದೆ. 2ನೇ ಮತ್ತು 3ನೇ ಹಂತದ ನಗರಗಳಲ್ಲೂ ಇಂದು ಪಂಚತಾರಾ (5-Star) ಹಾಗೂ ಸೆವೆನ್ ಸ್ಟಾರ್ ಹೋಟೆಲ್‌ಗಳು ತಲೆ ಎತ್ತುತ್ತಿವೆ. ಈ ಪ್ರಕಾರವಾಗಿ ಲೆಕ್ಕಹಾಕಿದರೆ, ಒಂದು ಸ್ಟಾರ್ ಹೋಟೆಲ್ ಆರಂಭವಾದರೆ ಕನಿಷ್ಠ 200 ಮಂದಿಗೆ ಉದ್ಯೋಗ ಲಭಿಸುತ್ತದೆ ಎಂತಾದರೆ, ಭವಿಷ್ಯದಲ್ಲಿ ಹೋಟೆಲ್​ ಉದ್ಯಮದ ಉದ್ಯೋಗವಕಾಶ ಸಾಗರವಾಗುವ ಸಾಧ್ಯತೆಯನ್ನ ಅನುಮಾನಿಸಲಾಗದು.

ಇನ್ನೊಂದೆಡೆ ಐಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮನುಷ್ಯರ ಕೆಲಸವನ್ನು ಕಸಿದುಕೊಳ್ಳುವ ಆತಂಕವಿದೆ. ಆದರೆ ಹೋಟೆಲ್ ಉದ್ಯಮದಲ್ಲಿ ಮನುಷ್ಯನೊಬ್ಬ ತೋರುವ ಆತಿಥ್ಯ, ಪ್ರೀತಿ ಮತ್ತು ಕೌಶಲ್ಯ ಯಾವುದೇ ಯಂತ್ರಗಳು ರಿಪ್ಲೇಸ್ ಮಾಡಲು ಸಾಧ್ಯವಿಲ್ಲ. ಈ ವಾಸ್ತವವನ್ನು ಅರಿತು, Medhavi Skills University ಸಹಯೋಗದೊಂದಿಗೆ (Free Hotel Management Course)ಈ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಕೋರ್ಸ್​​ಗೆ ಪೂರಕವಾಗಿ ಐಟಿಸಿ, ರ್ಯಾಡಿಸನ್ ಬ್ಲೂ, ದಿ ಫರ್ನ್, ರಾಯಲ್ ಆರ್ಕಿಡ್ ಸೇರಿದಂತೆ ದೇಶದ ಸುಮಾರು 95ಕ್ಕೂ ಹೆಚ್ಚು ಪ್ರತಿಷ್ಠಿತ ಸ್ಟಾರ್ ಹೋಟೆಲ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ನೇರವಾಗಿ ಅಲ್ಲಿಯೇ ತರಬೇತಿ ಪಡೆಯಲಿದ್ದಾರೆ.

ಲಭ್ಯವಿರುವ ಪ್ರಮುಖ 3 ಕೋರ್ಸ್‌ಗಳು

B.Sc. in Hospitality & Hotel Management (3 ವರ್ಷಗಳ ಪದವಿ)

  • ಅರ್ಹತೆ: ಪಿಯುಸಿ (12ನೇ ತರಗತಿ) ತೇರ್ಗಡೆ (ವಯೋಮಿತಿ 18-24).
  • ವಿಶೇಷತೆ: ಮೂರು ವರ್ಷಗಳ ಕಾಲ (36 ತಿಂಗಳು) ಪ್ರತಿ ತಿಂಗಳು ರೂ. 6000 ಶಿಷ್ಯವೇತನ ಲಭ್ಯ. ಉಚಿತ ಊಟ, ವಸತಿ ಇರಲಿದೆ. ಕೋರ್ಸ್ ಮುಗಿದ ಬಳಿಕ ದೇಶದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕನಿಷ್ಠ 25,000 ದಿಂದ 28,000 ರೂ. ಆರಂಭಿಕ ವೇತನದೊಂದಿಗೆ ಶೇ. 98% ಉದ್ಯೋಗ ಖಾತ್ರಿ ಇರುತ್ತದೆ.

Professional Diploma in Hospitality & Hotel Operations (1 ವರ್ಷ):

    • ಅರ್ಹತೆ: 10ನೇ ಅಥವಾ 12ನೇ ತರಗತಿ.
    • ವಿಶೇಷತೆ: ಸಮಯದ ಅಭಾವವಿದ್ದು, ಶೀಘ್ರವಾಗಿ ಉದ್ಯೋಗಕ್ಕೆ ಸೇರಿ ಸಂಪಾದನೆ ಶುರುಮಾಡಬೇಕು ಎನ್ನುವವರಿಗಾಗಿ ಈ ಫಾಸ್ಟ್-ಟ್ರಾಕ್ ಕೋರ್ಸ್. 12 ತಿಂಗಳ ಕಾಲ ತರಬೇತಿ ಹಾಗೂ ಮಾಸಿಕ ಸ್ಟೈಪೆಂಡ್ ಇರಲಿದ್ದು, ತರಬೇತಿಯ ಬಳಿಕ 18,000 ದಿಂದ 20,000 ರೂ. ವೇತನದ ಹುದ್ದೆಗಳು ಲಭ್ಯ.

    D.Voc in Hospitality Operations (2 ವರ್ಷಗಳು):

    • ಅರ್ಹತೆ: ಕನಿಷ್ಠ 10ನೇ ತರಗತಿ.
    • ವಿಶೇಷತೆ: ಡಿಗ್ರಿ ಅರ್ಧಕ್ಕೆ ಬಿಟ್ಟವರು, ಆರ್ಥಿಕ ಸಂಕಷ್ಟದಿಂದ ಓದು ನಿಲ್ಲಿಸಿದವರಿಗಾಗಿ ಇದು ವರದಾನ. 28 ವರ್ಷದ ವಯೋಮಿತಿಯವರೆಗಿನ ಯುವಕ-ಯುವತಿಯರು ಇದಕ್ಕೆ ಸೇರಬಹುದು. ಎರಡು ವರ್ಷಗಳ ಕಾಲ ಇಂಡಸ್ಟ್ರಿ ಎಕ್ಸ್‌ಪೋಸರ್ ಜೊತೆಗೆ ತರಬೇತಿ ನೀಡಲಾಗುತ್ತದೆ.

    60% ಆನ್-ದಿ-ಜಾಬ್ ಟ್ರೈನಿಂಗ್!

    ಸಾಮಾನ್ಯವಾಗಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಥಿಯರಿ ಓದುವ ಅಭ್ಯಾಸದಿಂದ ಹೊರಬಂದು, ನೇರವಾಗಿ ಸ್ಟಾರ್ ಹೋಟೆಲ್‌ಗಳಲ್ಲೇ 'ಆನ್-ದಿ-ಜಾಬ್ ಟ್ರೈನಿಂಗ್' (On-the-Job Training) ಪಡೆಯುವುದು ಈ ಕೋರ್ಸ್‌ನ ಅತಿ ದೊಡ್ಡ ಪ್ಲಸ್ ಪಾಯಿಂಟ್. ಶೇ. 60ರಷ್ಟು ಪ್ರಾಯೋಗಿಕ ತರಬೇತಿ ಇರುವುದರಿಂದ ವಿದ್ಯಾರ್ಥಿಯು ಕೋರ್ಸ್ ಮುಗಿಸಿ ಹೊರಬರುವ ಹೊತ್ತಿಗೆ ಅತ್ಯುನ್ನತ ಆತ್ಮವಿಶ್ವಾಸ ಹಾಗೂ ಅನುಭವವನ್ನು ಹೊಂದಿರುತ್ತಾನೆ. ಯಾವುದೇ ಇಂಟರ್ವ್ಯೂ ಅನ್ನು ಲೀಲಾಜಾಲವಾಗಿ ಎದುರಿಸುವ ಸಾಮರ್ಥ್ಯ ಪ್ರಾಪ್ತವಾಗುತ್ತದೆ.

    ಹೋಟೆಲ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ (Free Hotel Management Course)ಪ್ರಸ್ತುತ ಶೇ. 63ರಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಥಿಕ ದುಸ್ಥಿತಿಯಿಂದಾಗಿ ಕಾಲೇಜು ಮೆಟ್ಟಿಲು ಹತ್ತಲು ಸಾಧ್ಯವಾಗದ ಹೆಣ್ಣುಮಕ್ಕಳಿಗೆ ಈ ಕೋರ್ಸ್ ಭರವಸೆಯ ಬೆಳಕಾಗಿದೆ. ಉಚಿತವಾಗಿ ಒಂದು ಪ್ರತಿಷ್ಠಿತ ಡಿಗ್ರಿ/ಡಿಪ್ಲೋಮಾ ಕೈಸೇರುವುದರ ಜೊತೆಗೆ, ಕಲಿಯುವಾಗಲೇ ಸ್ವಂತ ಕಾಲಿನ ಮೇಲೆ ನಿಲ್ಲುವ ಅವಕಾಶವನ್ನು ಒದಗಿಸುತ್ತದೆ.

    2000 ವಿದ್ಯಾರ್ಥಿಗಳಿಗೆ ಅವಕಾಶ: ಜುಲೈ 31 ಕಡೆಯ ದಿನ

    ಕರ್ನಾಟಕದಾದ್ಯಂತ ಕನಿಷ್ಠ 2000 ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಉಚಿತ ಪ್ರವೇಶ ಕಲ್ಪಿಸುವ ಗುರಿಯನ್ನು ಆರ್ಯ ಚಾರಿಟೇಬಲ್ ಟ್ರಸ್ಟ್ ಹೊಂದಿದೆ. ಈಗಾಗಲೇ ವಿವಿಧ ಉದ್ಯೋಗ ಮೇಳಗಳ ಮೂಲಕ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 31 ಪ್ರವೇಶಾತಿಗಾಗಿ ಅಂತಿಮ ದಿನಾಂಕವಾಗಿದ್ದು, ಸೆಪ್ಟೆಂಬರ್ 1 ರಿಂದ ತರಬೇತಿಗಳು ಅಧಿಕೃತವಾಗಿ ಆರಂಭವಾಗಲಿವೆ.

    ಅರ್ಜಿ ಸಲ್ಲಿಕೆ ಮತ್ತು ಸಂಪರ್ಕ ಹೇಗೆ?

    ರಾಜ್ಯದ ಯಾವುದೇ ಜಿಲ್ಲೆಯ, ಯಾವುದೇ ಮೂಲೆಯ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಕೆಳಗಿನ ಮೊಬೈಲ್ ಸಂಖ್ಯೆಗೆ ವಾಟ್ಸ್ಯಾಪ್ ಮಾಡಬಹುದು, ಕಾಲ್ ಮಾಡಬಹುದು ಅಥವಾ ಇ-ಮೇಲ್ ಮಾಡಬಹುದು.

    • ಮೊಬೈಲ್ ಸಂಖ್ಯೆ: 94802 18248
    • ಇ-ಮೇಲ್ ಐಡಿ: aryacharitabletrustshivamogga@gmail.com
    • ಕಛೇರಿ ವಿಳಾಸ: ರವೀಂದ್ರ ನಗರ, 5ನೇ ಕ್ರಾಸ್, ಶಿವಮೊಗ್ಗ (ನೇರವಾಗಿ ಭೇಟಿ ಮಾಡಬಹುದು).
    • ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ (Google Form): https://forms.gle/Wc6x3FFg5w4fCk8t6

    ಯಾವುದೇ No Hidden Charges, ನೂರಕ್ಕೆ ನೂರರಷ್ಟು ಉಚಿತವಾದ ಈ ತರಬೇತಿ ಶಿಬಿರವು ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಯುವಜನರ ಪಾಲಿಗೆ ನಿಜಕ್ಕೂ ಒಂದು ಮೈಲುಗಲ್ಲಾಗಲಿದೆ.

    ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz