ತಂಗಿ ಮನೆ ಹುಡುಕಾಟದಲ್ಲಿ ಬೇರೆಯವರ ಮನೆ ಬಾಗಿಲು ತಟ್ಟಿದ ವ್ಯಕ್ತಿ : ಪೊಲೀಸರಿಗೆ ದೂರು

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಂಗಿಯ ಮನೆ ಹುಡುಕಲು ಹೋಗಿ ಅಪರಿಚಿತರ ಮನೆಯ ಬಾಗಿಲು ಬಡಿದು ಆತಂಕ ಸೃಷ್ಟಿಸಿದ ಘಟನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ: ಮಲಗಿದ್ದಲ್ಲಿಯೇ ಯುವಕನ ಭೀಕರ ಕೊಲೆ; ಪ್ರಕರಣ ದಾಖಲು

ಮನೆಯ ಮುಂದೆ ಅಪರಿಚಿತ ವ್ಯಕ್ತಿ ಬಾಗಿಲು ಬಡಿಯುತ್ತಿರುವುದನ್ನು ಕಂಡು ಗಾಬರಿಗೊಂಡ ದೂರುದಾರರು ತಕ್ಷಣ 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಇಆರ್‌ವಿ ಪೊಲೀಸ್ ಸಿಬ್ಬಂದಿ ಆ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದಾರೆ. ಆತ ಅತಿಯಾಗಿ ಮದ್ಯಪಾನ ಮಾಡಿದ್ದು, ತಂಗಿಯ ಮನೆ ಹುಡುಕುವ ಗೊಂದಲದಲ್ಲಿ ಬೇರೆ ಮನೆ ಬಾಗಿಲು ಬಡಿದಿರುವುದು ಬೆಳಕಿಗೆ ಬಂದಿದೆಬಳಿಕ ಪೊಲೀಸರು ಆತನಿಗೆ ಸೂಕ್ತ ತಿಳುವಳಿಕೆ ಹಾಗೂ ಕಡಕ್ ಎಚ್ಚರಿಕೆ ನೀಡಿ ಸ್ಥಳದಿಂದ ಕಳುಹಿಸಿಕೊಟ್ಟಿದ್ದಾರೆ.

Shimoga Drunk Man Knocks Stranger’s Door 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor