ಗದಗ್‌ನಿಂದ ಸೆಕೆಂಡ್ ಹ್ಯಾಂಡ್ ಯಮಹಾ RX ಬೈಕ್ ತಂದ ಸೌದಿ ಇಂಜಿನಿಯರ್: ಶಿವಮೊಗ್ಗ ಪೊಲೀಸರು ಹಿಡಿದಾಗ ಕಾದಿತ್ತು ಶಾಕ್!

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ತುಂಗಾ ನಗರ ಪೊಲೀಸ್ ಸ್ಟೇಷನ್​, ಸಾಂದರ್ಭಿಕ ಚಿತ್ರ

Shimoga ಶಿವಮೊಗ್ಗ : ಸೌದಿ ಅರೇಬಿಯಾದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಯಮಹಾ ಆರ್‌ಎಕ್ಸ್ (Yamaha RX) ಬೈಕ್ ಖರೀದಿಸಲು ಹೋಗಿ  ವಂಚನೆಗೊಳಗಾಗಿರುವ ಘಟನೆ ನಡೆದಿದೆ. ಈ ಕುರಿತು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Shimoga ಘಟನೆಯ ವಿವರ 

ದೂರುದಾರರು ಕಳೆದ 4 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಇಂಜಿನಿಯರ್ ಆಗಿ ವಾಸವಾಗಿದ್ದಾರೆ. ಇತ್ತೀಚೆಗೆ ಅವರು ಸೆಕೆಂಡ್ ಹ್ಯಾಂಡ್ ಯಮಹಾ ಆರ್‌ಎಕ್ಸ್ ಬೈಕ್ ಖರೀದಿಸಲು ಆನ್‌ಲೈನ್‌ನಲ್ಲಿ ಹುಡುಕಾಡಿದಾಗ ಗದಗ್‌ನಲ್ಲಿ ಒಂದು ಬೈಕ್ ಇರುವುದು ಕಂಡುಬಂದಿದೆ. ತಕ್ಷಣವೇ ಅದರ ಮಾಲೀಕನನ್ನು ಸಂಪರ್ಕಿಸಿದ್ದಾರೆ. ಆತ ತಾನು 2020 ರಲ್ಲಿ ಬೈಕ್ಖರೀದಿಸಿದ್ದು, ಈಗ ಹಣದ ತುರ್ತು ಇರುವುದರಿಂದ 55,000 ಗೆ ಮಾರಾಟ ಮಾಡುವುದಾಗಿ ನಂಬಿಸಿದ್ದಾನೆ.ಇದನ್ನು ನಂಬಿದ ಇಂಜಿನಿಯರ್, ಗದಗ್‌ಗೆ ತನ್ನ ಅಳಿಯ ಸೈಫುಲಾನನ್ನು ಕಳುಹಿಸಿ, ಆನ್‌ಲೈನ್ ಮೂಲಕ ಹಣ ಪಾವತಿಸಿ ಬೈಕ್ ಮತ್ತು ಒರಿಜಿನಲ್‌ನಂತೆ ಕಾಣುತ್ತಿದ್ದ ಆರ್‌.ಸಿ ಕಾರ್ಡ್ ಪಡೆದುಕೊಂಡಿದ್ದಾರೆ. ಬೈಕ್ ಸರಿಯಾಗಿದೆ ಎಂದೇ ಭಾವಿಸಿ ಅದನ್ನು ಶಿವಮೊಗ್ಗಕ್ಕೆ ತರಲಾಗಿತ್ತು.

ಇಂಜಿನಿಯರ್ ಸೌದಿಯಿಂದ ಶಿವಮೊಗ್ಗಕ್ಕೆ ರಜೆಯ ಮೇಲೆ ಬಂದಾಗ ಈ ಬೈಕನ್ನು ಬಳಸುತ್ತಿದ್ದರು. ಕಳೆದ ಜೂನ್ 17, 2026 ರಂದು ಸಂಜೆ ಗೋಪಾಳದ ವಿನಾಯಕ ಸರ್ಕಲ್ ಹತ್ತಿರ ಬೈಕ್‌ನ ಹೆಲ್ಮೇಟ್​  ಹಾಕದೆ ಚಲಿಸುತ್ತಿದ್ದಾಗ,  ಟ್ರಾಫಿಕ್​ ಪೊಲೀಸರು ಗಾಡಿಯನ್ನು ಹಿಡಿದು ವಾಹನ ತಪಾಸಣೆಗೆ ನಿಲ್ಲಿಸಿದ್ದಾರೆ.  ಈ ಸಂದರ್ಭದಲ್ಲಿ ಬೈಕ್‌ನ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಈ  ಬೈಕ್ 2019 ರಲ್ಲಿ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್ ಎಂದು ರೆಕಾರ್ಡ್ ಮೂಲಕ ಪತ್ತೆ ಹಚ್ಚಿದ್ದಾರೆ.

ಪೊಲೀಸರು ತಕ್ಷಣವೇ ಬೈಕ್‌ನ ಇಂಜಿನ್ ನಂಬರ್ ಹಾಗೂ ಚಾಸಿಸ್ ನಂಬರ್‌ಗಳನ್ನು ಪರಿಶೀಲಿಸಿದಾಗ. ಕಳ್ಳತನವಾದ ಅಸಲಿ ಕೇಸ್‌ನ ಇಂಜಿನ್ ಮತ್ತು ಚಾಸಿಸ್ ನಂಬರ್‌ಗಳಿಗೂ, ಇಂಜಿನಿಯರ್ ಬಳಿ ಇದ್ದ ಬೈಕ್‌ನ ನಂಬರ್‌ಗಳಿಗೂ ಯಾವುದೇ ಹೋಲಿಕೆ ಇರಲಿಲ್ಲ. ಆದರೆ ಬೈಕ್‌ನ ನಂಬರ್ ಪ್ಲೇಟ್ ಮಾತ್ರ ಕಳ್ಳತನದ ಬೈಕ್‌ನದ್ದೇ ಆಗಿತ್ತು.ಆರೋಪಿಗಳು ಕಳ್ಳತನದ ಬೈಕ್‌ನ ನಂಬರ್ ಬಳಸಿ ಬೇರೊಂದು ಬೈಕಿಗೆ ನಕಲಿ ಆರ್‌ಸಿ ಕಾರ್ಡ್, ನಕಲಿ ಇಂಜಿನ್ ಮತ್ತು ಚಾಸಿಸ್ ನಂಬರ್‌ಗಳನ್ನು ಮುದ್ರಿಸಿ ವಂಚನೆ ಎಸಗಿದ್ದಾರೆ. ಈ ಹಿನ್ನೆಲೆ  ತಾನು ಮೋಸ ಹೋಗಿರುವುದನ್ನು ಅರಿತ ಇಂಜಿನಿಯರ್ ಜೂನ್ 19 ರಂದು ತುಂಗಾನಗರ ಠಾಣೆಗೆ ಭೇಟಿ ನೀಡಿ ದೂರನ್ನು ದಾಖಲಿಸಿದ್ದಾರೆ.

Shimoga Second Hand Yamaha RX Bike Scam

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor